ಬೆಳಗಾವಿಯಲ್ಲಿ ಗುಂಡಿನ ಮೊರೆತ- ತಡರಾತ್ರಿ ಶೂಟೌಟ್ ಗೆ ವ್ಯಕ್ತಿ ಬಲಿ

ಬೆಳಗಾವಿಯ ಧಾಮಣೆ ಗ್ರಾಮದ ಸಮೀಪ ತಡರಾತ್ರಿ ಶೂಟ್ ಔಟ್ ಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ವಡಗಾವಿಯ  ಅರುಣ್ ಪರಶುರಾಮ ನಂದಿಹಳ್ಳಿ ಕೊಲೆಯಾದ ದುರ್ದೈವಿ . ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷನಾಗಿದ್ದ  ಈತ ಪತ್ನಿಯನ್ನಧಾಮಣೆ ಗ್ರಾಮಕ್ಕೆ ಬಿಟ್ಟು ಮರಳಿ ಬೆಳಗಾವಿಗೆ ಬರುವಾಗ ಪರಿಚಿತ ವ್ಯಕ್ತಿಗಳು ಕಾರು ಅಡ್ಡಗಟ್ಟಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಕೊಲೆ ಹಿಂದೆ ಹಣಕಾಸಿನ ವ್ಯವಹಾರ ಇರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.