Sunday, September 19, 2021
Homeಜಿಲ್ಲೆಬೆಂಗಳೂರುಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆ ಮೇಲಿಂದ ಬಿದ್ದು ಯುವತಿ ಸೇರಿ ಇಬ್ಬರ ದುರ್ಮರಣ

ಇದೀಗ ಬಂದ ಸುದ್ದಿ

ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆ ಮೇಲಿಂದ ಬಿದ್ದು ಯುವತಿ ಸೇರಿ ಇಬ್ಬರ ದುರ್ಮರಣ

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಹೆದ್ದಾರಿ ಮೇಲ್ಸೇತುವೆ ಮೇಲಿಂದ ಬಿದ್ದು ಬೈಕ್ ಸವಾರ ಮತ್ತು ಯುವತಿ ದಾರುಣವಾಗಿ ಸಾವಿಗೀಡಾಗಿದ್ದಾರೆ.

ಮೇಲ್ಸೇತುವೆ ಮೇಲೆ ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಯತಪ್ಪಿ ಬೈಕ್ ಸವಾರ ಮತ್ತು ಓರ್ವ ಯುವತಿ ಮೇಲಿಂದ ಕೆಳಗೆ ಹಾರಿ ಹೆದ್ದಾರಿ ಮೇಲೆ ಬಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿದ ಇಬ್ಬರ ಚಹರೆ ಪತ್ತೆಯಾಗಬೇಕಿದೆ. ಕಾರು ಮೇಲ್ಸೇತುವೆ ಅಂಚಿಗೆ ಸಿಲುಕಿದೆ. ಸ್ಥಳಕ್ಕೆ ಮೇಲ್ಸೇತುವೆ ಪೆಟ್ರೋಲಿಂಗ್ ಸಿಬ್ಬಂದಿ ದೌಡಾಯಿಸಿದ್ದು ಪರಿಶೀಲನೆಯಲ್ಲಿ ತೊಡಗಿದ್ದಾರೆ.‌

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img