Sunday, September 19, 2021
Homeರಾಜಕೀಯಬೆಲೆ ಏರಿಕೆ ಕುರಿತು ಸಿದ್ದರಾಮಯ್ಯ ವಾಗ್ದಾಳಿ

ಇದೀಗ ಬಂದ ಸುದ್ದಿ

ಬೆಲೆ ಏರಿಕೆ ಕುರಿತು ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು : ವಿಧಾನಸಭೆಯಲ್ಲಿ ಪೆಟ್ರೋಲ್‌, ಡಿಸೇಲ್‌, ಗ್ಯಾಸ್‌ ಸಿಲೆಂಡರ್ ಬೆಲೆ ಏರಿಕೆ ಸದ್ದು, ಗದ್ದಲ ಸೃಷ್ಟಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಪಕ್ಷವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ‌ ಬೆಲೆ ಏರಿಕೆ ಕುರಿತು ವಾಗ್ದಾಳಿ ನಡೆಸುತ್ತಿರುವಾಗ ಆಯಿಲ್‌ ಬಾಂಡ್‌ ಖರೀದಿಸಿದ್ದು ಆ ಸಮಯಕ್ಕೆ ಸರಿಯಿತ್ತು ಎಂದರು.

ಈ ವೇಳೆ ಸಚಿವ ಡಾ.ಕೆ ಸುಧಾಕರ್‌ ಮಧ್ಯೆ ಪ್ರವೇಶಸಿದ್ರು. ಇದ್ರಿಂದ ಸಿಟ್ಟಾದ ಸಿದ್ದರಾಮಯ್ಯ, ‘ಸಿಎಂ ಇದ್ದಾರೆ ಸುಧಾಕರ್‌ ಪ್ಲೀಸ್‌ ಸಿಟ್‌ಡೌನ್‌’ ಎಂದರು.

ಆಗ ಹೇಳೋ ತಾಕತ್ತು ಇದ್ದಾಗ ಕೇಳುವ ತಾಕತ್ತು ಕೂಡ ಇರಬೇಕು. ವಿಧಾನ ಸಭೆಯಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಹೇಳಿದ್ರು. ಆಗ ಪ್ರಿಯಾಂಕ್‌ ಖರ್ಗೆ ವಿರುದ್ಧ ಆಡಳಿತ ಪಕ್ಷದ ಸದಸ್ಯರ ಆಕ್ರೋಶ ವ್ಯಕ್ತ ಪಡಿಸಿದ್ದು, 70 ವರ್ಷ ಕಾಂಗ್ರೆಸ್‌ ನವರು ದೇಶವನ್ನ ಲೂಟಿ ಹೊಡೆದಿದ್ದಾರೆ ಕಿಡಿಕಾರಿದ್ರು.

ಇನ್ನು ಮಾತು ಮುಂದುವರೆಸಿದ ವಿಪಕ್ಷ ನಾಯಕ, ‘ಹಿಂದಿನ ಸರ್ಕಾರದಲ್ಲಿ ಪೆಟ್ರೋಲ್‌, ಡಿಸೇಲ್‌ ಬೆಲೆ ಎಷ್ಟಿತ್ತು? ಈಗ ಎಷ್ಟಾಗಿದೆ ಎಂದು ನಾನು ಪ್ರಸ್ತಾಪ ಮಾಡುತ್ತಿದ್ದೇನೆ. ಕೂಲಿ ಮಾಡುವವನು ವರ್ಷಕ್ಕೆ 1 ಲಕ್ಷ ತೆರಿಗೆ ಕಟ್ಟುತ್ತಿದ್ದಾನೆ. ಒಂದು ಸರ್ವೆಯಲ್ಲಿ ಈ ಮಾಹಿತಿ ಬಯಲಾಗಿದೆ. ಬಸ್‌ನಲ್ಲಿ ಓಡಾಡೋದು, ಗಾಡಿಯಲ್ಲಿ ಓಡಾಡೋದು, ಆಗತ್ಯ ವಸ್ತುಗಳನ್ನ ಖರೀದಿಸುವುದು, ಔಷಧ ಖರೀದಿಸುವುದು, ಹೀಗೆ ಎಲ್ಲ ರೀತಿ ಕೂಲಿ ಮಾಡುವವನು ತೆರಿಗೆ ಕಟ್ಟುತ್ತಾನೆ’ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img