Wednesday, September 22, 2021
Homeಸುದ್ದಿ ಜಾಲಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡುವವರಿಗೆ ಬ್ಯಾಡ್ ನ್ಯೂಸ್

ಇದೀಗ ಬಂದ ಸುದ್ದಿ

ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡುವವರಿಗೆ ಬ್ಯಾಡ್ ನ್ಯೂಸ್

ಜೊಮ್ಯಾಟೊ ಮತ್ತು ಸ್ವಿಗ್ಗಿಯಂತಹ ಆನ್ ಲೈನ್ ಆಹಾರ ವಿತರಣಾ ವೇದಿಕೆಗಳಿಂದ ಆಗಾಗ್ಗೆ ಆರ್ಡರ್ ಮಾಡುವ ವ್ಯಕ್ತಿಗಳಿಗೆ ಕೆಟ್ಟ ಸುದ್ದಿ ಸಿಕ್ಕಿದೆ. ಆಯಪ್ ಆಧಾರಿತ ಇ-ಕಾಮರ್ಸ್ ಆಪರೇಟರ್ʼಗಳು (ECOs) ಒದಗಿಸುವ ಆಹಾರ ವಿತರಣಾ ಸೇವೆಗಳು ಶೀಘ್ರದಲ್ಲೇ ಸರಕು ಮತ್ತು ಸೇವಾ ತೆರಿಗೆಯನ್ನ (GST) ವಿಧಿಸಬೋದು.

ಹೌದು., ಸೆಪ್ಟೆಂಬರ್ 17ರಂದು ನಡೆಯಲಿರುವ ಮುಂಬರುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ, ಸ್ವಿಗ್ಗಿ ಮತ್ತು ಜೊಮ್ಯಾಟೊದಂತಹ ಇಸಿಒಗಳು ನೀಡುವ ರೆಸ್ಟೋರೆಂಟ್ ವಿತರಣಾ ಸೇವೆಗಳ ಮೇಲೆ ಜಿಎಸ್ಟಿ ವಿಧಿಸುವ ಪ್ರಸ್ತಾಪವನ್ನು ಚರ್ಚಿಸಲಾಗುವುದು.

ಜಿಎಸ್ಟಿ ಮಂಡಳಿಯ ಫಿಟ್ ಮೆಂಟ್ ಸಮಿತಿಯು ಈ ಸಲಹೆಯನ್ನ ನೀಡಿದೆ. ಕ್ಲೌಡ್ ಕಿಚನ್ʼಗಳು/ಸೆಂಟ್ರಲ್ ಕಿಚನ್ʼಗಳಿಂದ ಆಹಾರ, ಡೋರ್ ಡೆಲಿವರಿ ಮತ್ತು ಟೇಕ್ ಅವೇ ಯನ್ನು ‘ರೆಸ್ಟೋರೆಂಟ್ ಸೇವೆ’ಯ ಅಡಿಯಲ್ಲಿ ಒಳಗೊಳ್ಳಲಾಗುತ್ತದೆ ಎಂಬ ಸುತ್ತೋಲೆಯ ಮೂಲಕ ಅದನ್ನ ಸ್ಪಷ್ಟಪಡಿಸಬೇಕು ಎಂದು ಸಮಿತಿ ಪ್ರಸ್ತಾಪಿಸಿದೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img