Wednesday, September 22, 2021
Homeರಾಜಕೀಯಶಿಕ್ಷಣ ಸಚಿವ ಬಿ.ಸಿ ನಾಗೇಶ್ ರನ್ನ ತರಾಟೆಗೆ ತೆಗೆದುಕೊಂಡ ಸಿಎಂ

ಇದೀಗ ಬಂದ ಸುದ್ದಿ

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರನ್ನ ತರಾಟೆಗೆ ತೆಗೆದುಕೊಂಡ ಸಿಎಂ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದರೂ 6-12ನೇ ತರಗತಿಗಳ ಶಾಲೆಗಳನ್ನು ಆರಂಭ ಮಾಡಲಾಗಿದೆ. ಈಗ 1ರಿಂದ 5ನೇ ತರಗತಿ ತೆರೆಯಲು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮುಂದಾಗಿದ್ದಾರೆ. ಹಾಗಾಗಿ ಸಿಎಂ ಬಸವರಾಜ್​​ ಬೊಮ್ಮಾಯಿ ಅವರು ನಾಗೇಶ್ ರನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಯಾವುದೇ ಕಾರಣಕ್ಕೂ 1ರಿಂದ 5 ತರಗತಿಗಳ ಶಾಲೆಗಳನ್ನು ತೆರೆಯು​​ವ ವಿಚಾರಕ್ಕೆ ಕೈ ಹಾಕಬೇಡಿ. ಇಂದು ಕೊರೋನಾ ಕಡಿಮೆ ಇರಬಹುದು, ನಾಳೆ ಮತ್ತೆ ಬರಲ್ಲ ಎಂದು ಏನು ಗ್ಯಾರಂಟಿ? ಮಕ್ಕಳಿಗೆ ಕೊರೋನಾ ಲಸಿಕೆ ಬೇರೆ ಇನ್ನೂ ಬಂದಿಲ್ಲ‌. ದಿಢೀರ್​​ ಮಕ್ಕಳಿಗೂ ಕೊರೋನಾ ಹರಡಿದರೆ ಏನು ಮಾಡೋದು. ಇದು ಸೂಕ್ಷ್ಮ ವಿಚಾರ ಏಕಾಏಕಿ ಇಂತಹ ನಿರ್ಧಾರಕ್ಕೆ ಬರಬೇಡಿ ಎಂದು ಬಿ.ಸಿ ನಾಗೇಶ್​​ ಗೆ ಸಿಎಂ ಖಡಕ್​ ಸೂಚನೆ ನೀಡಿದ್ದಾರೆ.

6-12ನೇ ತರಗತಿಗಳನ್ನು ಈಗಾಗಲೇ ಶುರು ಮಾಡಲಾಗಿದೆ. ಇಲ್ಲಿಯವರೆಗೂ ಆ ಮಕ್ಕಳಲ್ಲಿ ಯಾರಿಗೂ ಕೊರೋನಾ ಬಂದಿಲ್ಲ ಎನ್ನುವ ಕಾರಣಕ್ಕೆ ಉಳಿದ ತರಗತಿಗಳನ್ನು ಆರಂಭ ಮಾಡಲು ಬಿ.ಸಿ ನಾಗೇಶ್​ ಸಿದ್ದತೆ ನಡೆಸಿಕೊಂಡಿದ್ದರು. ಹಾಗಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಈ ಹೊತ್ತಲ್ಲಿ ಯಾವುದೇ ನಿರ್ಧಾರ ಬೇಡ. ಅಧಿವೇಶ ಮುಗಿಯುವತನಕ ಯಾವ ನಿರ್ಧಾರಕ್ಕೂ ಬರಬೇಡಿ. ಇದಕ್ಕೆ ಸೂಕ್ತ ನೀಡಲು ತಾಂತ್ರಿಕ ಸಲಹ ಸಮಿತಿ ಮತ್ತು ಆರೋಗ್ಯ ಸಚಿವರು ಇದ್ದಾರೆ ಎಂದು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img