Sunday, September 19, 2021
Homeಸುದ್ದಿ ಜಾಲಮಾಸ್ಕ್ ನಿಂದ ಮುಕ್ತಿ ಪಡೆಯಲು ಇನ್ನೂ ಒಂದೂವರೆ ವರ್ಷ ಕಾಯಬೇಕು

ಇದೀಗ ಬಂದ ಸುದ್ದಿ

ಮಾಸ್ಕ್ ನಿಂದ ಮುಕ್ತಿ ಪಡೆಯಲು ಇನ್ನೂ ಒಂದೂವರೆ ವರ್ಷ ಕಾಯಬೇಕು

ಹೊಸದಿಲ್ಲಿ: ದೇಶವಾಸಿಗಳು ಮಾಸ್ಕ್ ನಿಂದ ಮುಕ್ತಿ ಪಡೆಯಲು ಇನ್ನೂ ಒಂದೂವರೆ ವರ್ಷ ಕಾಲ ಕಾಯಬೇಕು…
ಹೀಗೆಂದು ನೀತಿ ಆಯೋಗದ ಸದಸ್ಯ ಡಾ| ವಿ.ಕೆ. ಪೌಲ್‌ ಪ್ರತಿಪಾದಿಸಿದ್ದಾರೆ.

ಸಂಪೂರ್ಣ ಲಸಿಕೆ ವಿತರಣೆ, ಕೊರೊನಾಗೆ ಪರಿಣಾಮಕಾರಿ ಔಷಧಗಳು, ಸಾರ್ವಜನಿಕರ ಶಿಸ್ತುಬದ್ಧ ವರ್ತನೆ ಎಲ್ಲವೂ ಸೇರಿದರಷ್ಟೇ ಕೋವಿಡ್‌ ವಿರುದ್ಧ ಹೋರಾಟ ಯಶಸ್ವಿಯಾಗಲು ಸಾಧ್ಯ.

ಹೀಗಾಗಿ ಕನಿಷ್ಠ ಪಕ್ಷ ಮುಂದಿನ ವರ್ಷದ ಡಿಸೆಂಬರ್‌ವರೆಗಾದರೂ ಎಲ್ಲರೂ ಮಾಸ್ಕ್ ಧರಿಸಲೇಬೇಕಾಗುತ್ತದೆ. ಅದು ಬಿಟ್ಟು ಬೇರೆ ದಾರಿಯೇ ಇಲ್ಲ ಎಂದು ಪೌಲ್‌ ಹೇಳಿದ್ದಾರೆ.

ಕೊರೊನಾ ಮೂರನೇ ಅಲೆಯನ್ನು ತಳ್ಳಿಹಾಕದ ಪೌಲ್‌, ಸರಣಿ ಹಬ್ಬಗಳ ಕಾರಣ ದೇಶವು ಅಪಾಯದ ಅವಧಿಗೆ ಕಾಲಿಡುತ್ತಿದೆ. ಮುಂದಿನ ಮೂರ್ನಾಲ್ಕು ತಿಂಗಳುಗಳು ನಿರ್ಣಾಯಕವಾಗಿದ್ದು, ತ್ವರಿತಗತಿಯಲ್ಲಿ ಲಸಿಕೆ ವಿತರಣೆಯ ಮೂಲಕ ಸಾಮೂಹಿಕ ಪ್ರತಿರೋಧದ ಗೋಡೆ ಕಟ್ಟಬೇಕಿದೆ. ಎಲ್ಲರೂ ಒಗ್ಗಟ್ಟಾಗಿ ತಮ್ಮ ತಮ್ಮ ರಕ್ಷಣೆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಸೋಂಕನ್ನು ನಿಯಂತ್ರಿಸಲು ಸಾಧ್ಯ ಎಂದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img