Sunday, September 19, 2021
Homeಸುದ್ದಿ ಜಾಲಮುಂಬೈ ಖ್ಯಾತ ನಟ ಸೋನು ಸೂದ್ ಅವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ...

ಇದೀಗ ಬಂದ ಸುದ್ದಿ

ಮುಂಬೈ ಖ್ಯಾತ ನಟ ಸೋನು ಸೂದ್ ಅವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

ಮುಂಬೈ ಖ್ಯಾತ ನಟ ಸೋನು ಸೂದ್ ಅವರ ಮುಂಬೈ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಈ ದಾಳಿ 6 ವಿವಿಧ ಪ್ರದೇಶಗಳಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಆದಾಯ ತೆರಿಗೆ ಇಲಾಖೆ ಬುಧವಾರ ನಟ ಸೋನು ಸೂದ್ ಅವರ ನಿವಾಸ ಮತ್ತು ಕಚೇರಿಯ ಮೇಳೆ ದಾಳಿ ಮಾಡಿದೆ. ಮೂಲಗಳ ಪ್ರಕಾರ, ಇದು ಹುಡುಕಾಟ ಅಥವಾ ವಶಪಡಿಸಿಕೊಳ್ಳುವಿಕೆಯಲ್ಲ, ಪರಿಶೀಲನೆ ಅಥವಾ ತನಿಖೆಯಾಗಿದೆ. ನಟ ಒಂದು ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ ಗಳಿಸಿದ ನಿಜವಾದ ಆದಾಯವನ್ನ ಕಂಡುಹಿಡಿಯಲು ಆದಾಯ ತೆರಿಗೆ ಸಮೀಕ್ಷೆಯನ್ನ ನಡೆಸಿದೆ ಎನ್ನಲಾಗ್ತಿದೆ. ಅದ್ರಂತೆ, ಈ ದಾಳಿ ದಾಖಲೆಗಳ ತಪಾಸಣೆಯನ್ನ ಒಳಗೊಂಡಿದ್ದು, ಯಾವುದನ್ನೂ ವಶಪಡಿಸಿಕೊಳ್ಳುವಿಕೆಯನ್ನ ಒಳಗೊಂಡಿಲ್ಲ ಎಂದು ಹೇಳಲಾಗ್ತಿದೆ.

ಅಂದ್ಹಾಗೆ, ಕಳೆದ ತಿಂಗಳು ಆಗಸ್ಟ್ ನಲ್ಲಿ ಸೋನು ಸೂದ್ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದರು. ಈ ಸಭೆಯ ನಂತರ, ಸಿಎಂ ಕೇಜ್ರಿವಾಲ್ ಮತ್ತು ನಟ ಸೋನು ಸೂದ್ ಕೂಡ ಜಂಟಿಯಾಗಿ ಮಾಧ್ಯಮಗಳನ್ನ ಉದ್ದೇಶಿಸಿ ಮಾತನಾಡಿದರು. ದೆಹಲಿ ಸರ್ಕಾರದ ವಿಶೇಷ ಕಾರ್ಯಕ್ರಮ ‘ದೇಶ್ ಕೆ ಮೆಂಟರ್ಸ್’ ನ ಬ್ರಾಂಡ್ ಅಂಬಾಸಿಡರ್ ಆಗಲು ಸೋನು ಸೂದ್ ಒಪ್ಪಿಕೊಂಡಿದ್ದಾರೆ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದರು.

ದೆಹಲಿ ಶಿಕ್ಷಣ ಇಲಾಖೆ ಶೀಘ್ರದಲ್ಲೇ ‘ದೇಶ್ ಕೆ ಮೆಂಟರ್ಸ್’ ಕಾರ್ಯಕ್ರಮವನ್ನು ಆರಂಭಿಸಲಿದೆ ಎಂದು ಅವರು ಹೇಳಿದ್ದರು. ಸೋನು ಸೂದ್ ಅದರ ಬ್ರಾಂಡ್ ಅಂಬಾಸಿಡರ್ ಆಗಲು ಒಪ್ಪಿಕೊಂಡಿದ್ದಾರೆ. ನಟ ಸೋನು ಸೂದ್ ಅವರ ಕೆಲಸ ಮತ್ತು ಸಮಾಜದ ಜವಾಬ್ದಾರಿಗಳನ್ನು ಪೂರೈಸುವುದರಿಂದ ಜನರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಸಿಎಂ ಕೇಜ್ರಿವಾಲ್ ಈ ಸಂದರ್ಭದಲ್ಲಿ ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img