Sunday, September 19, 2021
Homeಸುದ್ದಿ ಜಾಲತುಂಗಭದ್ರಾ ಜಲಾನಯದಿಂದ ನೀರು ಬಿಡುಗಡೆ : ಹಂಪಿ ಸ್ಮಾರಕಗಳು ಮುಳುಗಡೆ

ಇದೀಗ ಬಂದ ಸುದ್ದಿ

ತುಂಗಭದ್ರಾ ಜಲಾನಯದಿಂದ ನೀರು ಬಿಡುಗಡೆ : ಹಂಪಿ ಸ್ಮಾರಕಗಳು ಮುಳುಗಡೆ

ಬಳ್ಳಾರಿ, ಸೆಪ್ಟೆಂಬರ್ 15: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಅಧಿಕ ಮಳೆಯಾದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ತುಂಗಭದ್ರಾ ಜಲಾಶಯ ತುಂಬಿರುವ ಪರಿಣಾಮ 60 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ ಎಂದು ಜಲಾಶಯ ಬೋರ್ಡ್ ಸ್ಪಷ್ಟನೆ ನೀಡಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಕುರಿತು ಮಂಗಳವಾರವೇ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಡಪ, ಅನಂತಪುರ ಹಾಗೂ ಮೆಹಬೂಬ್ ನಗರ ಜಿಲ್ಲಾಡಳಿತಗಳಿಗೆ ತುಂಗಭದ್ರಾ ಜಲಾಶಯ ಬೋರ್ಡ್ ಮಾಹಿತಿ ರವಾನಿಸಿತ್ತು.

ಈಗಾಗಲೇ 60 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವುದರಿಂದ ವಿಶ್ವವಿಖ್ಯಾತ ಹಂಪಿಯ ಹಲವು ಸ್ಮಾರಕಗಳು, ಮಂಟಪಗಳು ಮುಳುಗಡೆಯಾಗಿವೆ. ಪ್ರಮುಖವಾಗಿ ಪುರಂದರದಾಸರ ಮಂಟಪ, ಧಾರ್ಮಿಕ ವಿಧಿವಿಧಾನ ಮಂಟಪ ಮುಳುಗಡೆಯಾಗಿವೆ. ಇನ್ನು ಈಗಾಗಲೇ ಸ್ಥಳೀಯ ಆಡಳಿತಗಳ ನೆರವಿನಿಂದ ಆಯಾ ಜಿಲ್ಲಾಡಳಿತಗಳೂ ಸಹ ಜನರಿಗೆ ನದಿಪಾತ್ರದ ಕಡೆ ಸುಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಆದರೆ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಕಾಡುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img