Wednesday, September 22, 2021
Homeಸುದ್ದಿ ಜಾಲಮೆಟ್ರೊ ಸಂಚಾರ ಅವಧಿ ವಿಸ್ತರಿಸಿ: ಶಾಸಕರ ಒತ್ತಾಯ

ಇದೀಗ ಬಂದ ಸುದ್ದಿ

ಮೆಟ್ರೊ ಸಂಚಾರ ಅವಧಿ ವಿಸ್ತರಿಸಿ: ಶಾಸಕರ ಒತ್ತಾಯ

ಬೆಂಗಳೂರು: ‘ನಗರದಲ್ಲಿ ಮೆಟ್ರೊ ರೈಲು ಸಂಚಾರ ಸಮಯವನ್ನು ವಿಸ್ತರಿಸಬೇಕು ಎಂಬ ಒತ್ತಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಂಚಾರದ ಅವಧಿ ವಿಸ್ತರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಹಾಗಾಗಿ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಅನೇಕ ಶಾಸಕರು ಒತ್ತಾಯಿಸಿದ್ದಾರೆ.

ಶಾಸಕರು ಹೇಳುವುದೇನು ?

’20 ನಿಮಿಷಗಳಿಗೊಂದು ಮೆಟ್ರೊ ಸಂಚರಿಸಲಿ’

ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೆ ಏರಿದೆ. ಖಾಸಗಿ ವಾಹನಗಳ ಬಳಕೆಯೂ ದುಬಾರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೆಟ್ರೊ ರೈಲು ಸಂಚಾರದ ಸಮಯವನ್ನೂ ಕಡಿತಗೊಳಿಸಿರುವುದು ಸರಿಯಲ್ಲ. ವಿದೇಶಗಳಲ್ಲಿ ದಿನದ 24 ಗಂಟೆಯೂ ಮೆಟ್ರೊ ರೈಲು ಸೇವೆ ಇರುತ್ತದೆ. ಬೆಂಗಳೂರಿನಲ್ಲಿ ರಾತ್ರಿ 10ರವರೆಗಾದರೂ ಮೆಟ್ರೊ ರೈಲು ಸೇವೆ ಇಲ್ಲ ಎಂದರೆ ಹೇಗೆ. ರಾತ್ರಿ 8ರಿಂದ 11ರವರೆಗೆ ಕನಿಷ್ಠ 20 ನಿಮಿಷ ಅಥವಾ ಅರ್ಧ ತಾಸಿಗೆ ಒಂದರಂತೆ ರೈಲು ಸಂಚರಿಸಲು ಕ್ರಮ ಕೈಗೊಳ್ಳಬೇಕು

‘2 ತಾಸು ವಿಸ್ತರಿಸಲೇಬೇಕು’

ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಮೆಟ್ರೊ ರೈಲು ಸಂಚಾರ ಸಮಯ ಕಡಿತಗೊಳಿಸಲಾಗಿದೆ. ಆದರೆ, ಈಗ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಬಸ್‌, ರೈಲುಗಳು ಮೊದಲಿನಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ಮೆಟ್ರೊ ರೈಲುಗಳ ಸೇವೆಯನ್ನು ಮೊದಲಿನಂತೆ ನೀಡಬೇಕು. ಕನಿಷ್ಠಪಕ್ಷ ರಾತ್ರಿ 10ರವರೆಗಾದರೂ ಸಂಚಾರ ಸಮಯವನ್ನು ವಿಸ್ತರಿಸಬೇಕು.

‘ಜನರ ಅನುಕೂಲಕ್ಕೆ ಆದ್ಯತೆ ಸಿಗಬೇಕು’

ಸಾರ್ವಜನಿಕ ಸಾರಿಗೆ ಅಥವಾ ಯಾವುದೇ ಸೇವೆ ಜನರಿಗೆ ಅನುಕೂಲಕ್ಕೆ ತಕ್ಕಂತೆ ಇರಬೇಕು. ಮೆಟ್ರೊ ರೈಲು ಸಾರಿಗೆಯೂ ಎಲ್ಲರಿಗೂ ಅನುಕೂಲಕರ. ರಾತ್ರಿ ವೇಳೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದಲೂ ಮೆಟ್ರೊ ಸೇವೆ ಅತ್ಯುಪಯುಕ್ತ. 10 ಗಂಟೆಯವರೆಗಾದರೂ ಇದನ್ನು ವಿಸ್ತರಿಸಬೇಕು.

‘ಬಸ್‌, ರೈಲು, ಮೆಟ್ರೊ ನಡುವೆ ಸಮನ್ವಯವಿರಲಿ’

ಸಾರ್ವಜನಿಕ ಸಾರಿಗೆಗಳು ಒಂದಕ್ಕೊಂದು ಪೂರಕವಾಗಿರಬೇಕು. ಬಸ್‌, ರೈಲು ಮತ್ತು ಮೆಟ್ರೊ ರೈಲು ಸೇವೆಗಳ ನಡುವೆ ಸಮನ್ವಯ ಇರಬೇಕು. ವ್ಯಾಪಾರ-ವಹಿವಾಟು, ಆರ್ಥಿಕ ಚಟುವಟಿಕೆಗಳೆಲ್ಲವೂ ಹಿಂದಿನಂತೆಯೇ ನಡೆಯುತ್ತಿವೆ. ಸಾರ್ವಜನಿಕರ ಸಹಜ ಓಡಾಟಕ್ಕೆ ವ್ಯವಸ್ಥೆ ಮಾಡಬೇಕಾದುದು ಸರ್ಕಾರದ ಕರ್ತವ್ಯ. ರಾತ್ರಿ 10.30ರವರೆಗಾದರೂ ಮೆಟ್ರೊ ಸೇವೆ ವಿಸ್ತರಿಸಬೇಕು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img