Wednesday, September 22, 2021
Homeಸುದ್ದಿ ಜಾಲಪ್ರಶಾಂತ್ ಸಂಬರಗಿ ವಿರುದ್ಧ ಚಕ್ರವರ್ತಿ ಚಂದ್ರಚೂಡ್ ದೂರು

ಇದೀಗ ಬಂದ ಸುದ್ದಿ

ಪ್ರಶಾಂತ್ ಸಂಬರಗಿ ವಿರುದ್ಧ ಚಕ್ರವರ್ತಿ ಚಂದ್ರಚೂಡ್ ದೂರು

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 8ರಲ್ಲಿ ಬಹಳ ಹೆಸರು ಮಾಡಿರುವ ಸ್ಪರ್ಧಿಗಳ ಪೈಕಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್​ ಕೂಡ ಸೇರಿದ್ದಾರೆ. ಬಿಗ್‌ಬಾಸ್‌ ಮನೆಯೊಳಕ್ಕೆ ಹೋಗುವ ಮುನ್ನ ಭಾರಿ ದೋಸ್ತ್‌ ಆಗಿದ್ದ ಇವರಿಬ್ಬರು ಸದ್ಯ ಬದ್ಧವೈರಿಗಳು.

ಇದೇ ವೈರತ್ವದ ಹಿನ್ನೆಲೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ನಗರ ಪೊಲೀಸ್ ಕಮಿಷನರ್​ಗೆ ಸಂಬರಗಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಪ್ರಶಾಂತ್ ಸಂಬರಗಿ ಅವರು ಸಿನಿಮಾ ನಟ-ನಟಿಯರು ಹಾಗೂ ರಾಜಕೀಯ ನಾಯಕರನ್ನ ಟಾರ್ಗೆಟ್ ಮಾಡಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಚಂದ್ರಚೂಡ್‌ ಮನವಿ ಮಾಡಿಕೊಂಡಿದ್ದಾರೆ.

ರಾಜಕೀಯ ವ್ಯಕ್ತಿ, ಸಿನಿಮಾ ನಟ-ನಟಿಯರ ವಿರುದ್ಧ ಸಾಕ್ಷ್ಯಗಳು ಇಲ್ಲದೆ ಪ್ರಶಾಂತ್ ಸಂಬರಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬೆದರಿಕೆ ಹಾಕುತ್ತ ಸಂಬರಗಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ಧ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಿ ಎಂದು ಅವರು ಆಗ್ರಹಿಸಿದ್ದಾರೆ.

ಯಾವುದೇ ಆಧಾರ ಇಲ್ಲದೆ ನಟ-ನಟಿಯರನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ. ಮೂರು ವರ್ಷಗಳ ಹಿಂದೆ ಮೀಟೂ ಪ್ರಕರಣದಲ್ಲಿ ಗಾಳಿಯಲ್ಲಿ ಗುಂಡು ಹೊಡೆದಿದ್ದರು. ಶೃತಿ ಹರಿಹರನ್ ಗೆ ಕ್ರೈಸ್ತ ಮಿಷನರಿಯಿಂದ ಕೋಟ್ಯಂತರ ಹಣ ಸಂದಾಯವಾಗಿದೆ ಎಂದು ಹೇಳಿದ್ದರು. ಆದರೆ ಯಾವುದೇ ಸಾಕ್ಷ್ಯಾಧಾರ ಕೊಡಲಿಲ್ಲ. ಜಮೀರ್ ಅಹಮ್ಮದ್‌ ತೆರಿಗೆ ಹಣದಲ್ಲಿ ಶ್ರೀಲಂಕಾ ಕ್ಯಾಸಿನೋಗೆ ಹೋಗಿ ಮೋಜು-ಮಸ್ತಿ ಮಾಡ್ತಿದ್ದಾರೆ ಎಂದು ವೃಥಾ ಆರೋಪಿಸಿದರು. ನಟಿ, ನಿರೂಪಕಿ ಅನುಶ್ರೀ ಸೇರಿದಂತೆ ಕೆಲವರು ನಟಿಯರು ಡ್ರಗ್ಸ್‌ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ. ಅದರ ಸಾಕ್ಷ್ಯಾಧಾರಗಳೂ ಇಲ್ಲ. ಕನ್ನಡ ಸಿನಿಮಾ ರಂಗದ ಮಾನವನ್ನು ದೇಶಾದ್ಯಂತ ಹರಾಜು ಹಾಕಿದಂತಾಗಿದೆ. ಆದ್ದರಿಂದ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ದೂರಿನಲ್ಲಿ ಚಕ್ರವರ್ತಿ ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img