Wednesday, September 22, 2021
Homeಜಿಲ್ಲೆಬೆಂಗಳೂರುಪ್ರೀತಿ ಹೆಸರಲ್ಲಿ ಯುವತಿಯರಿಗೆ ಮೋಸ, ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್​ಮೇಲ್

ಇದೀಗ ಬಂದ ಸುದ್ದಿ

ಪ್ರೀತಿ ಹೆಸರಲ್ಲಿ ಯುವತಿಯರಿಗೆ ಮೋಸ, ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್​ಮೇಲ್

ಬೆಂಗಳೂರು: ಪ್ರೇಮದ ಬಲೆ ಬೀಸಿ ಯುವತಿಯರನ್ನು ಪ್ರೀತಿಯಲ್ಲಿ ಬೀಳಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯುವತಿಯರ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಬ್ಲ್ಯಾಕ್‍ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದವನನ್ನು ನಗರದ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಬಂಧಿಸಿರುವುದು ಬೆಳಕಿಗೆ ಬಂದಿದೆ.

ಬ್ಯಾಡರಹಳ್ಳಿಯ ರಾಕೇಶ್ (26) ಬಂಧಿತ ಆರೋಪಿಯಾಗಿದ್ದಾನೆ. ಆತನಿಂದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಯುವತಿಯೊಬ್ಬಳು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ಮೊಬೈಲ್ ಪರಿಶೀಲಿಸಿದಾಗ ಬರೋಬ್ಬರಿ ಆರು ಯುವತಿಯರ ಖಾಸಗಿ ದೃಶ್ಯ ಸೆರೆ ಹಿಡಿದು ಹಿಂಸಿಸುತ್ತಿದ್ದ ಎಂಬುದು ಬಯಲಾಗಿದೆ. ದೂರುದಾರೆ 24 ವರ್ಷದ ಸಂತ್ರಸ್ತೆ ನಗರದಲ್ಲಿ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದು, ಕೆಲ ತಿಂಗಳ ಹಿಂದೆ ಆಕೆಗೆ ಆರೋಪಿ ರಾಕೇಶ್‍ನ ಪರಿಚಯವಾಗಿತ್ತು. ರಾಕೇಶ್ ಪ್ರೀತಿಸುವುದಾಗಿ ಹೇಳಿ ಸಂತ್ರಸ್ತೆಗೆ ಪ್ರೇಮ ನಿವೇದನೆ ಮಾಡಿದ್ದ. ಆತ ನಿಜವಾಗಿಯೂ ಪ್ರೀತಿಸುತ್ತಿದ್ದಾನೆಂದು ಭಾವಿಸಿದ ಯುವತಿ, ಆತನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿದ್ದಳು. ನಂತರ ಇಬ್ಬರೂ ವಾಟ್ಸ್ಯಾಪ್‍ನಲ್ಲಿ ಚಾಟಿಂಗ್ ಮಾಡಿಕೊಂಡು ಸಲುಗೆ ಬೆಳೆಸಿಕೊಂಡಿದ್ದರೆಂದು ಎಂದು ಪೊಲೀಸರು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img