Wednesday, September 22, 2021
Homeಸುದ್ದಿ ಜಾಲಸದ್ಯಕ್ಕೆ‌ ಬಸ್ ಟಿಕೆಟ್ ದರ‌ ಹೆಚ್ಚಳವಿಲ್ಲ

ಇದೀಗ ಬಂದ ಸುದ್ದಿ

ಸದ್ಯಕ್ಕೆ‌ ಬಸ್ ಟಿಕೆಟ್ ದರ‌ ಹೆಚ್ಚಳವಿಲ್ಲ

ಬೆಂಗಳೂರು(ಸೆ.14): ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ದಿನೇ ದಿನೇ ಹೆಚ್ಚಾಗ್ತಿದೆ. ಕೊರೋನಾ ಜೊತೆಗೆ ದುಬಾರಿ ಬದುಕಿಗೆ ಬಡಜನತೆ ಕಂಗಾಲಾಗುತ್ತಿದ್ದಾರೆ. ಈ ನಡುವೆ ರಾಜ್ಯದ ಪ್ರಯಾಣಿಕರಿಗೆ ಬಸ್​ ಟಿಕೆಟ್​​ ಬೆಲೆ ಏರಿಕೆ‌ ಆತಂಕವಿತ್ತು. ಆದರೆ ಈ ಆತಂಕವನ್ನು‌ ಸದ್ಯಕ್ಕೆ ಸರ್ಕಾರ ದೂರ ಮಾಡಿದೆ. ಜೊತೆಗೆ ಸಾರಿಗೆ ಸಿಬ್ಬಂದಿಗೂ ಗುಡ್ ನ್ಯೂಸ್ ಇದೆ.

ಕೊರೋನಾದಿಂದ ಇರುವ ಕೆಲಸ ಹೋಗಿ, ವ್ಯಾಪಾರವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಮೂರನೇ ಅಲೆ ಆತಂಕದ ನಡುವೆ ಪೆಟ್ರೋಲ್, ಡೀಸೆಲ್, ಮನೆ ಅಡುಗೆಯ ಗ್ಯಾಸ್ ಬೆಲೆ ದಿನೇ ದಿನೇ‌ ಹೆಚ್ಚಾಗುತ್ತಿದೆ. ದಿನ‌ಬಳಕೆಯ ವಸ್ತುಗಳ ಬೆಲೆಯೂ ಏರುತ್ತಿದೆ. ಇದರಿಂದ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿ ಎಂದು ಬಿಎಂಟಿಸಿ ಸೇರಿದಂತೆ ವಿವಿಧ ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು.

ಆದರೆ ಸದ್ಯ ಸರ್ಕಾರ ಪ್ರಯಾಣಿಕರಿಗೆ ಇನ್ನಷ್ಟು ಹೊರೆ ಮಾಡುವ ಯಾವ ಯೋಚನೆಯನ್ನೂ ಮಾಡಿಲ್ಲ. ಈ ಕುರಿತು ಸ್ಪಷ್ಟವಾಗಿ ಹೇಳಿರುವ ಸಾರಿಗೆ ಸಚಿವ ಶ್ರೀರಾಮುಲು ಸರ್ಕಾರಕ್ಕೆ ಎಷ್ಟೇ ಹೊರೆಯಾದ್ರೂ ಟಿಕೆಟ್ ದರ ಏರಿಸುವುದಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನರ ಮೇಲೆ ಹೊರೆ ಹಾಕುವುದಿಲ್ಲ. ಇದನ್ನ ಸ್ವತಃ ಸಿಎಂ ಬಸವರಾಜ್ ಬೊಮ್ಮಯಿ ಅವರೇ ಹೇಳಿದ್ದಾರೆ. ನಿಗಮದ ಆರ್ಥಿಕ ಪುನಶ್ಚೇತನಕ್ಕೆ ಬೇರೆ ಮೂಲಗಳಿಂದ ಹಣ ಒದಗಿಸುವ ಕೆಲಸ ಮಾಡುತ್ತೇವೆ ಎಂದೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img