Wednesday, September 22, 2021
Homeಸುದ್ದಿ ಜಾಲಹಳಿ ತಪ್ಪಿ ನದಿಗೆ ಉರುಳಿದ ಗೂಡ್ಸ್​ ಟ್ರೈನ್

ಇದೀಗ ಬಂದ ಸುದ್ದಿ

ಹಳಿ ತಪ್ಪಿ ನದಿಗೆ ಉರುಳಿದ ಗೂಡ್ಸ್​ ಟ್ರೈನ್

ಇಂದು ಬೆಳಗಿನ ಜಾವದ ಸುಮಾರಿನಲ್ಲಿ ಈ ಅನಾಹುತ ನಡೆದಿದೆ. ಗೋಧಿಯನ್ನು ಹೊತ್ತೊಯ್ಯುತ್ತಿದ್ದ ರೈಲು ಹಳಿ ತಪ್ಪಿದೆ. ಇನ್ನು ಎಂಜಿನ್​ ಟ್ರ್ಯಾಕ್​ ಮೇಲೆ ಇರುವುದರಿಂದ ರೈಲು ಚಾಲಕ ಮತ್ತು ಇತರೆ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯು ಭಾರ ಕುಸಿತದಿಂದ ಭಾರೀ ಬಿರುಗಾಳಿ, ಮಳೆಯಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿನ ಬೋಗಿಗಳು ನೀರಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ಗೋಧಿ ನೀರಿನ ಪಾಲಾಗಿದೆ. ರೈಲು ಫಿರೋಜಪುರದಿಂದ ಖುರ್ದಾಗೆ ಹೋಗುತ್ತಿದ್ದ ರೈಲು ನದಿರಾ ನದಿಯ ಸಮೀಪದಲ್ಲಿ ಹಳಿ ತಪ್ಪಿದೆ.

ಘಟನೆ ಬಳಿಕ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ 12 ರೈಲುಗಳ ಸಂಚಾರ ರದ್ದು ಮಾಡಾಗಿದ್ದು, 12 ರೈಲುಗಳ ಮಾರ್ಗ ಬದಲಾಯಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img