Wednesday, September 22, 2021
Homeಮಂಗಳೂರುನಿಫಾ ವೈರಸ್​ ಶಂಕಿತ ವ್ಯಕ್ತಿಯ ಸ್ವ್ಯಾಬ್ ಮಾದರಿ ಪುಣೆಯ ಲ್ಯಾಬ್​​ಗೆ ರವಾನೆ, ಒಂದು ದಿನದೊಳಗೆ ವರದಿ

ಇದೀಗ ಬಂದ ಸುದ್ದಿ

ನಿಫಾ ವೈರಸ್​ ಶಂಕಿತ ವ್ಯಕ್ತಿಯ ಸ್ವ್ಯಾಬ್ ಮಾದರಿ ಪುಣೆಯ ಲ್ಯಾಬ್​​ಗೆ ರವಾನೆ, ಒಂದು ದಿನದೊಳಗೆ ವರದಿ

ಮಂಗಳೂರು: ಕಾರವಾರ ಮೂಲದ ವ್ಯಕ್ತಿಯೊಬ್ಬನು ಸ್ವಯಂ ಆಗಿ ತನಗೆ ನಿಫಾ ಇರಬಹುದು ಎಂದು ಹೇಳಿದ್ದು ಬಿಟ್ಟರೆ, ನಿಫಾಕ್ಕೆ ಸಂಬಂಧಿಸಿದ ಯಾವುದೇ ಲಕ್ಷಣಗಳು ಆತನಲ್ಲಿ ಕಾಣಿಸಿಕೊಂಡಿಲ್ಲ. ಆದರೂ ಆತನ ಸ್ವ್ಯಾಬ್​ ಮಾದರಿಯನ್ನು ಬೆಂಗಳೂರು ಮೂಲಕ ಪುಣೆಯ ಲ್ಯಾಬ್​​ಗೆ ಕಳುಹಿಸಿಕೊಡಲಾಗಿದೆ. ಒಂದು ದಿನದೊಳಗೆ ಬರುವ ಸಾಧ್ಯತೆ ಇದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಆ ವ್ಯಕ್ತಿ ಕೆಲಸ ಮಾಡುವ ಸಂಸ್ಥೆಯಲ್ಲಿ ವಿಚಾರಿಸಿದಾಗ ಅಲ್ಲಿಯೂ ಯಾರೂ ಸೋಂಕಿತರಿಲ್ಲ ಎಂಬ ಮಾಹಿತಿ ದೊರಕಿದೆ. ಈ ಬಗ್ಗೆ ಯಾವುದೇ ಭಯ ಇಲ್ಲ ಎಂದು ಹೇಳಿದರೂ, ಈ ವ್ಯಕ್ತಿ ಫೋಬಿಯಾದಿಂದ ಬಹಳ ದೃಢವಾಗಿ ನಿಫಾ ಇರುವ ಶಂಕೆ ವ್ಯಕ್ತಪಡಿಸಿರುವುದರಿಂದ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡದೇ ಅವರ ಮಾದರಿಯನ್ನು ಬೆಂಗಳೂರು ಮೂಲಕ ಪುಣೆಯ ಲ್ಯಾಬ್​ಗೆ ಕಳುಹಿಸಿಕೊಟ್ಟಿದೆ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img