Wednesday, September 22, 2021
Homeಸುದ್ದಿ ಜಾಲಪುಟ್ಟ ಅಂಗಡಿಯಲ್ಲಿ ತಿಂಡಿ ಸೇವಿಸಿದ ಸೂಪರ್ ಸ್ಟಾರ್

ಇದೀಗ ಬಂದ ಸುದ್ದಿ

ಪುಟ್ಟ ಅಂಗಡಿಯಲ್ಲಿ ತಿಂಡಿ ಸೇವಿಸಿದ ಸೂಪರ್ ಸ್ಟಾರ್

ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಸರಳತೆಯನ್ನು ತೋರಿಸುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ರಸ್ತೆ ಬದಿಯ ಪುಟ್ಟ ಅಂಗಡಿಯೊಂದರಲ್ಲಿ ತಿಂಡಿ ಸೇವಿಸಿದ್ದಾರೆ. ಶೂಟಿಂಗ್ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ವಾಹನ ನಿಲ್ಲಿಸಿದ ಅವರು, ತಮ್ಮ ತಂಡದೊಂದಿಗೆ ಪುಟ್ಟ ಅಂಗಡಿಯಲ್ಲಿ ತಿಂಡಿ ಸೇವಿಸಿದ್ದಾರೆ. ಮಾಲೀಕ ಹಣ ಬೇಡವೆಂದರೂ ಒತ್ತಾಯದಿಂದ ಆತನ ಕೈಯಲ್ಲಿ ದುಡ್ಡು ಕೊಟ್ಟು ಕಾರು ಹತ್ತಿದ್ದಾರೆ ಅಲ್ಲು ಅರ್ಜುನ್.

ಅಲ್ಲು ಅರ್ಜುನ್ ಅವರ ಈ ವಿಡಿಯೋ ಟ್ವಿಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಳೆದ 15 ವರ್ಷಗಳಿಂದ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಈ ನಟನ ಸರಳೆಗೆ ಅಭಿಮಾನಿಗಳ ವರ್ಗ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img