Wednesday, September 22, 2021
Homeಪಶ್ಚಿಮ ಬಂಗಾಳಮಕ್ಕಳಿಗೆ ತೀವ್ರ ಜ್ವರ: 130 ಮಂದಿ ಆಸ್ಪತ್ರೆಗೆ ದಾಖಲು

ಇದೀಗ ಬಂದ ಸುದ್ದಿ

ಮಕ್ಕಳಿಗೆ ತೀವ್ರ ಜ್ವರ: 130 ಮಂದಿ ಆಸ್ಪತ್ರೆಗೆ ದಾಖಲು

ಜಲಪೈಗುರಿ( ಪಶ್ಚಿಮ ಬಂಗಾಳ): ತೀವ್ರ ಜ್ವರ ಮತ್ತು ಅತಿಸಾರ (Diarrhea) ದಿಂದ ಕನಿಷ್ಠ 130 ಮಕ್ಕಳನ್ನು ಜಲಪೈಗುರಿ ಜಿಲ್ಲೆಯ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಈ ಮಕ್ಕಳಲ್ಲಿ ಕೆಲವರು ಕೂಚ್‌ಬೆಹಾರ್ ಜಿಲ್ಲೆಗೆ ಸೇರಿದವರೂ ಆಗಿದ್ದಾರೆ. ಈ ಮಕ್ಕಳಲ್ಲಿ ಕೆಲವರ ಸ್ಥಿತಿ ಗಂಭೀರವಾದ ಕಾರಣದಿಂದ ಅವರನ್ನು ಉತ್ತರ ಬಂಗಾಳ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರ ಮಾಡಲಾಗಿದೆ.

ಮಕ್ಕಳಲ್ಲಿ ಕಾಣಿಸಿಕೊಂಡಿರುವುದು ಡೆಂಗ್ಯೂ, ಚಿಕೂನ್ ಗುನ್ಯಾ ಅಥವಾ ಜಪಾನೀಸ್ ಎನ್ಸೆಫಾಲಿಟಿಸ್ ಇರಬಹುದು. ನಾವು ಸ್ವ್ಯಾಬ್ ಮತ್ತು ರಕ್ತದ ಮಾದರಿಗಳನ್ನು ಕೋಲ್ಕತಾಗೆ ಕಳುಹಿಸುತ್ತೇವೆ. ಈ ಆಸ್ಪತ್ರೆಯಲ್ಲೂ ಕೆಲವು ಪರೀಕ್ಷೆಗಳನ್ನು ಮಾಡುತ್ತೇವೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ವೈದ್ಯರ ತಂಡದ ವೈದ್ಯರೊಬ್ಬರು ಹೇಳಿದ್ದಾರೆ.

ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಐವರು ವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ತಂಡವು ಮಕ್ಕಳ ವಾರ್ಡ್‌ಗೆ ಭೇಟಿ ನೀಡಿ ರೋಗಿಗಳನ್ನು ಪರೀಕ್ಷಿಸಿದೆ. ಜೊತೆಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img