Wednesday, September 22, 2021
Homeಸುದ್ದಿ ಜಾಲಆಸ್ಕರ್ ಫರ್ನಾಂಡಿಸ್​ಗೆ ರಾಜಕೀಯ ನಾಯಕರ ನಮನ

ಇದೀಗ ಬಂದ ಸುದ್ದಿ

ಆಸ್ಕರ್ ಫರ್ನಾಂಡಿಸ್​ಗೆ ರಾಜಕೀಯ ನಾಯಕರ ನಮನ

ಉಡುಪಿ : ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್​​​ ಅವರಿಗೆ ತವರು ಜಿಲ್ಲೆ ಉಡುಪಿಯಲ್ಲಿ ಅಂತಿಮ ನಮನ ಸಲ್ಲಿಸಲಾಗಿದೆ. ರಾಜ್ಯ ಮತ್ತು ದೆಹಲಿಗೆ ಕೊಂಡಿಯಂತಿದ್ದ ಹಿರಿಯ ನಾಯಕನನ್ನು ಕಳೆದುಕೊಂಡು ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಉಡುಪಿ ಜಿಲ್ಲೆಯೂ ಅನಾಥವಾದಂತಾಗಿದೆ.

ಸೋಮವಾರ ನಿಧನರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥಿವ ಶರೀರವನ್ನು ಇಂದು ಉಡುಪಿಗೆ ತರಲಾಯಿತು. ದೆಹಲಿ ಮಟ್ಟದ ಹೈಕಮಾಂಡ್ ನಾಯಕನಾಗಿ ಬೆಳೆದರೂ, ತವರು ಜಿಲ್ಲೆ ಉಡುಪಿಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಆಸ್ಕರ್ ಪಾರ್ಥಿವ ಶರೀರಕ್ಕೆ ನಗರದ ಪ್ರಮುಖ ಸ್ಥಳಗಳಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.

9.30ರ ವೇಳೆಗೆ ಮಂಗಳೂರಿನ ಆಸ್ಪತ್ರೆಯಿಂದ ನೇರವಾಗಿ ಪಾರ್ಥಿವ ಶರೀರವನ್ನು ಉಡುಪಿಯ ಕವಿ ಮುದ್ದಣ ರಸ್ತೆಯಲ್ಲಿರುವ ಶೋಕಮಾತಾ ಇಗರ್ಜಿಗೆ ತರಲಾಯಿತು. ಮಾರ್ಗಮಧ್ಯದಲ್ಲಿ ಆಸ್ಕರ್ ಅಭಿಮಾನಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಆಸ್ಕರ್ ಕುಟುಂಬ ನೆಚ್ಚಿಕೊಂಡಿದ್ದ ಶೋಕಮಾತಾ ಇಗರ್ಜಿಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ಧಾರ್ಮಿಕ ವಿಧಿವಿಧಾನ ನಡೆಸಿಕೊಟ್ಟರು. ವಿವಿಧ ಧರ್ಮಗುರುಗಳ ಉಪಸ್ಥಿತಿಯಲ್ಲಿ ಅಂತಿಮ ಪ್ರಾರ್ಥನೆ ಸಲ್ಲಿಸಲಾಯಿತು. ಪಾರ್ಥಿವ ಶರೀರಕ್ಕೆ ಜಲಪ್ರೋಕ್ಷಣೆ ಮಾಡುವ ಮೂಲಕ ಸದ್ಗತಿಗಾಗಿ ಪ್ರಾರ್ಥಿಸಲಾಯಿತು. ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮಪ್ರಾಂತ್ಯದ ಅನೇಕ ಧರ್ಮಗುರುಗಳು, ಸದಸ್ಯರು ಭಾಗಿಯಾಗಿದ್ದರು. ವಿಶೇಷ ಬಲಿಪೂಜೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img