Wednesday, September 22, 2021
Homeಕಾರವಾರಕಾರವಾರದ ಯುವಕನಿಗೆ ನಿಫಾ ಸೋಂಕು ಶಂಕೆ

ಇದೀಗ ಬಂದ ಸುದ್ದಿ

ಕಾರವಾರದ ಯುವಕನಿಗೆ ನಿಫಾ ಸೋಂಕು ಶಂಕೆ

ಕೇರಳದಲ್ಲಿ ನಿಫಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರಿಕೆ ವಹಿಸಲಾಗಿತ್ತು. ಈ ನಡುವೆಯೂ ದಕ್ಷಿಣ ಕನ್ನಡ ಯುವಕನೋರ್ವನಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ನಿಫಾ ವೈರಸ್ ಟೆಸ್ಟಿಂಗ್ ಮಾಡುವ ಇಕ್ವಿಪ್‌ಮೆಂಟ್ ಕಿಟ್ ತಯಾರಿಸುತ್ತಿದ್ದ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದದ ಯುವಕನಿಗೆ ಈ ಭಯ ಕಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಯುವಕನಿಗೆ ನಿಫಾ ಟೆಸ್ಟ್ ಮಾಡಿದ್ದು ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ಬಳಿಕ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.

ನಿಫಾ ವೈರಸ್‌ನ ಆಂತಕದ ಹಿನ್ನಲೆ ಯುವಕನೊಬ್ಬ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಾರವಾರ ಮೂಲದ ಈ ಯುವಕ ಗೋವಾದಲ್ಲಿ ನಿಫಾ ವೈರಸ್ ಟೆಸ್ಟಿಂಗ್ ಮಾಡುವ ಕಿಟ್ ತಯಾರಿಕಾ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಂದ ರಜೆಯಲ್ಲಿ ಕಾರವಾರಕ್ಕೆ ಬಂದ ಮೇಲೆ ಆತನಿಗೆ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ನಿಫಾ ವೈರಸ್ ಇರಬಹುದು ಎಂದು ಕಾರವಾರ ಆಸ್ಪತ್ರೆಗೆ ಹೋಗಿ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಬಂದಿದ್ದಾನೆ. ಆ ಬಳಿಕ ಅಲ್ಲಿಂದ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಬಂದಿದ್ದು, ಆತನ ಸ್ಯಾಂಪಲ್‌ನ್ನು ಸಂಗ್ರಹ ಮಾಡಿರುವ ದಕ್ಷಿಣಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಪುಣೆಯ ಲ್ಯಾಬ್‌ಗೆ ಕಳುಹಿಸಿದೆ.

ಲ್ಯಾಬ್‌ನಲ್ಲಿ ನಿಫಾ ವೈರಸ್ ಟೆಸ್ಟ್ ಕಿಟ್ ತಯಾರಿಸುವ ಸಂದರ್ಭ ಅದರಲ್ಲಿ ಆಯಕ್ಟೀವ್ ಕಂಟೆಟ್‌ಗಳನ್ನ ಹಾಕಲಾಗುತ್ತೆ. ಹೀಗಾಗಿ ಇಕ್ವಿಪ್‌ಮೆಂಟ್ ಕಿಟ್ ತಯಾರಿಸುವವರು ಪಿ.ಪಿ.ಇ ಕಿಟ್ ಧರಿಸುವುದು ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಗಿರುತ್ತದೆ. ಆದರೂ ಸಹ ಯುವಕ ಆತಂಕ ವ್ಯಕ್ತಪಡಿಸಿರುವುದರಿಂದ ಯುವಕನನ್ನು ಈಗಾಗಲೇ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ಆದರೆ ಯುವಕನಿಗೆ ಯಾವುದೇ ನಿಫಾ ಲಕ್ಷಣಗಳಿಲ್ಲ, ಆತ ಸ್ಥಿರವಾಗಿದ್ದಾನೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img