Sunday, September 19, 2021
Homeಕೋವಿಡ್-19ಚೀನಾದ ಮತ್ತೊಂದು ನಗರದಲ್ಲಿ ಕೋವಿಡ್-19 ಡೆಲ್ಟಾ ಹಾವಳಿ

ಇದೀಗ ಬಂದ ಸುದ್ದಿ

ಚೀನಾದ ಮತ್ತೊಂದು ನಗರದಲ್ಲಿ ಕೋವಿಡ್-19 ಡೆಲ್ಟಾ ಹಾವಳಿ

ಭಾರತ ಮೂಲದ ರೂಪಾಂತರಿ ತಳಿಯಾದ ಡೆಲ್ಟಾ ವೈರಾಣು ಚೀನಾದ ಶಿಯಾಮೆನ್ ನಗರದಲ್ಲಿ ಹಾವಳಿ ಎಬ್ಬಿಸಿದೆ. ಮಂಗಳವಾರ ಒಂದೇ ದಿನ 59 ಡೆಲ್ಟಾ ಪ್ರಕರಣಗಳು ಪತ್ತೆಯಾಗಿದ್ದು, ನಗರದಲ್ಲಿ ಡೆಲ್ಟಾ ವೈರಾಣು ವ್ಯಾಪಕವಾಗಿ ಹರಡಿರುವ ಆತಂಕ ಎದುರಾಗಿದೆ.

ಕಳೆದ ಎರಡು ವಾರಗಳಲ್ಲಿ ಪತ್ತೆಯಾಗಿದ್ದ ಡೆಲ್ಟಾ ಪ್ರಕರಣಗಳ ಸಂಖ್ಯೆ 43. ಇದೀಗ ಒಂದೇ ದಿನ 59 ಪ್ರಕರಣಗಳು ಪತ್ತೆಯಾಗಿರುವುದರಿಂದ ಆರೋಗ್ಯಾಧಿಕಾರಿಗಳು ಆತಂಕಗೊಂಡಿದ್ದಾರೆ.

ಇದರೊಂದಿಗೆ ಚೀನಾದ 2 ನಗರಗಳಲ್ಲಿ ಡೆಲ್ಟಾ ವೈರಾಣು ಹಾವಳಿ ಕಂಡುಬಂದಂತಾಗಿದೆ. ಈ ಹಿಂದೆ ಫ್ಯುಜಿಯಾನ್ ಪ್ರಾಂತ್ಯದಲ್ಲಿ 33 ಡೆಲ್ಟಾ ಪ್ರಕರಣಗಳು ವರದಿಯಾಗಿದ್ದು ಆತಂಕಕ್ಕೆ ಕಾರಣವಾಗಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img