Sunday, September 19, 2021
Homeಚನ್ನಪಟ್ಟಣಚನ್ನಪಟ್ಟಣ ತಾಲೂಕಿನಲ್ಲಿ ಹೆಚ್ಚಿತು ಕಾಡಾನೆಗಳ ಹಾವಳಿ

ಇದೀಗ ಬಂದ ಸುದ್ದಿ

ಚನ್ನಪಟ್ಟಣ ತಾಲೂಕಿನಲ್ಲಿ ಹೆಚ್ಚಿತು ಕಾಡಾನೆಗಳ ಹಾವಳಿ

ಚನ್ನಪಟ್ಟಣ(ರಾಮನಗರ) : ಚನ್ನಪಟ್ಟಣ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಉಪಟಳ ಹೆಚ್ಚುತ್ತಿದೆ. ನಿತ್ಯವೂ ಒಂದೊಂದು ದಿಕ್ಕಿನಿಂದ ಕಾಡಾನೆಗಳು ನಾಡಿಗೆ ನುಗ್ಗುತ್ತಿವೆ. ಆನೆಗಳ ಹಾವಳಿಯಿಂದ ರೈತರ ಬೆಳೆ ನಾಶವಾಗುತ್ತಿದೆ. ಸ್ಥಳೀಯರು ಸೇರಿದಂತೆ ಪ್ರಯಾಣಿಕರೂ ಸಹ ಜೀವ ಭಯದಿಂದ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂದು ಚನ್ನಪಟ್ಟಣ ನಗರದ ಅಪ್ಪಗೆರೆ, ಗ್ರಾಮೀಣ ಭಾಗದ ನೀಲಕಂಠನಹಳ್ಳಿ, ಗೋವಿಂದೇಗೌಡನದೊಡ್ಡಿ ಮೂಲಕ ಮುಂಜಾನೆ ಎರಡು ಆನೆಗಳು ಹಾದು ಹೋಗಿವೆ. ಸಿಕ್ಕ ಫಸಲುಗಳನ್ನು ತಿಂದಿದ್ದಲ್ಲದೇ ಬೆಳೆಗಳನ್ನು ತುಳಿದು ನಾಶ ಪಡಿಸಿವೆ.

ಕೂಡ್ಲೂರು ಕೆರೆಯ ಅಂಚಿನಲ್ಲಿ ಹಾದು ಹೋಗಿ ವಾಲೇತೋಪು ಗ್ರಾಮದ ತೋಟವೊಂದರಲ್ಲಿ ಬೀಡು ಬಿಟ್ಟಿವೆ. ಮುಂಜಾನೆ ನಾಲ್ಕು ಗಂಟೆಯಿಂದ ಈ ರಸ್ತೆಗಳಲ್ಲಿ ವಾಯು ವಿಹಾರಕ್ಕೆ ತೆರಳುವವರು, ಕೆಲಸಕ್ಕಾಗಿ ಓಡಾಡುವಂತಹ ಪ್ರಯಾಣಿಕರೂ ಸಹ ಆತಂಕ ಪಡುವಂತಾಗಿದೆ.

ಅರಣ್ಯ ಅಧಿಕಾರಿಗಳು ದೂರು ಬಂದ ಸಮಯದಲ್ಲಿ ಮಾತ್ರ ಪಟಾಕಿ ಸಿಡಿಸಿ ಆನೆಗಳನ್ನು ನೆಲೆನಿಂತ ಜಾಗದಿಂದ ದೂರ ಓಡಿಸಲಷ್ಟೇ ಸೀಮಿತವಾಗುತ್ತಿದ್ದಾರೆ ಎನ್ನುವ ಮಾತುಗಳೂ ಸಹ ಕೇಳಿ ಬಂದಿವೆ. ಕಾಡಿನಿಂದ ನಾಡಿಗೆ ಕಾಡು ಪ್ರಾಣಿಗಳು ಬಾರದಂತೆ ಖೆಡ್ಡಾ ನಿರ್ಮಿಸುವುದನ್ನು ಬಿಟ್ಟು, ನಾಡಿಗೆ ಬಂದ ನಂತರ ಓಡಿಸುವ ನೆಪವನ್ನಷ್ಟೇ ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ ಎನ್ನುವ ಆರೋಪ ಇದೀಗ ಸಾರ್ವತ್ರಿಕವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img