Wednesday, September 22, 2021
Homeಸುದ್ದಿ ಜಾಲಟ್ರಿನಿಟಿ ಹೋಟೆಲ್​ನಲ್ಲಿ ಅಗ್ನಿ ಅವಘಡ: 7 ಜನರ ರಕ್ಷಣೆ

ಇದೀಗ ಬಂದ ಸುದ್ದಿ

ಟ್ರಿನಿಟಿ ಹೋಟೆಲ್​ನಲ್ಲಿ ಅಗ್ನಿ ಅವಘಡ: 7 ಜನರ ರಕ್ಷಣೆ

ಬೆಂಗಳೂರು: ಟ್ರಿನಿಟಿ ಸರ್ಕಲ್ ಬಳಿಯಿರುವ ಅಜಂತಾ ಟ್ರಿನಿಟಿ ಹೋಟೆಲ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, 2 ಮಹಡಿಯಲ್ಲಿದ್ದ ವಸ್ತುಗಳು ಭಸ್ಮವಾಗಿವೆ. ನಿನ್ನೆ ರಾತ್ರಿ 10.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ.

ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡದಿಂದ, ಇಡೀ ಹೋಟೆಲ್​ಗೆ ಜ್ವಾಲೆ ಆವರಿಸಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ, ಹೋಟೆಲ್​ನಲ್ಲಿ ತಂಗಿದ್ದ ನಾಗೇಶ್, ಮಹೇಂದ್ರ, ಸತ್ಯಪ್ರಕಾಶ್, ದಿನೇಶ್ ಹಾಗೂ ಅಭಿಷೇಕ್ ಅವರನ್ನು ರಕ್ಷಿಸಿದರು.

ದಟ್ಟ ಹೊಗೆ ಆವರಿಸಿಕೊಂಡಿದ್ದರಿಂದ ರಾಜಪ್ಪ ಹಾಗೂ ಸುರೇಶ್ ಎಂಬುವರು ಎರಡನೇ ಮಹಡಿಯಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಪಾರ್ಕಿಂಗ್ ಲಾಟ್​ನಲ್ಲಿದ್ದ ಒಂದು ಆಟೋ, ಒಂದು ಬೊಲೆರೊ ವಾಹನ ಸುಟ್ಟು ಕರಕಲಾಗಿರುವುದರಿಂದ ಮೊದಲು ಬೊಲೆರೊ ವಾಹನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಬೊಲೆರೊ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಪಕ್ಕದಲ್ಲೇ ಇದ್ದ ಆಟೋಗೆ ತಗುಲಿರಬಹುದು. ಬಳಿಕ ಕಟ್ಟಡಕ್ಕೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ವೈರ್​​ಗೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಇದರಿಂದ ಶಾರ್ಟ್ ಸರ್ಕ್ಯೂಟ್ ಆಗಿ ಇಡೀ ಹೋಟೆಲ್​ ಅಗ್ನಿಗಾಹುತಿಯಾಗಿದೆ ಎಂದು ಶಂಕಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img