Sunday, September 19, 2021
Homeಸುದ್ದಿ ಜಾಲಎಲ್ ಜೆಪಿ ಸಂಸದ ಪ್ರಿನ್ಸ್ ರಾಜ್ ವಿರುದ್ಧ ಎಫ್ಐಆರ್

ಇದೀಗ ಬಂದ ಸುದ್ದಿ

ಎಲ್ ಜೆಪಿ ಸಂಸದ ಪ್ರಿನ್ಸ್ ರಾಜ್ ವಿರುದ್ಧ ಎಫ್ಐಆರ್

ನವದೆಹಲಿ: ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕ ಜನಶಕ್ತಿ ಪಕ್ಷದ ಸಂಸದ ಪ್ರಿನ್ಸ್ ರಾಜ್​ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ನಾಲ್ಕು ತಿಂಗಳ ಹಿಂದೆಯೇ ಸಂಸದ ಪ್ರಿನ್ಸ್​ ರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತನ್ನ ಸೋದರ ಸಂಬಂಧಿ ಪ್ರಿನ್ಸ್ ರಾಜ್ ವಿರುದ್ಧದ ಆರೋಪವನ್ನು ಮುಚ್ಚಿ ಹಾಕಲು ಯತ್ನಿಸಿದ ಆರೋಪದಡಿ ಎಲ್​ಜೆಪಿ ನಾಯಕ ಚಿರಾಗ್​ ಪಾಸ್ವಾನ್​ ಹೆಸರನ್ನೂ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಿನ್ಸ್ ರಾಜ್ ವಿರುದ್ಧ ನವದೆಹಲಿಯ ಕನ್ನಾಟ್ ಪ್ಲೇಸ್ ಠಾಣಾ ಪೊಲೀಸರಿಗೆ ಯುವತಿಯೊಬ್ಬಳು ದೂರು ನೀಡಿದ್ದಳು. ಚಿರಾಗ್ ಪಾಸ್ವಾನ್​ ಚಿಕ್ಕಪ್ಪ ರಾಮಚಂದ್ರ ಪಾಸ್ವಾನ್​ ಪುತ್ರ ಪ್ರಿನ್ಸ್ ರಾಜ್​​. ಮದ್ಯ ಸೇವಿಸಿ ಪ್ರಜ್ಞೆ ತಪ್ಪಿದಾಗ ಪ್ರಿನ್ಸ್​ ರಾಜ್​ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದರೂ, ಎಫ್​ಐಆರ್​ ದಾಖಲಾಗಿರಲಿಲ್ಲ.

2021ರ ಫೆಬ್ರವರಿ 10ರ ಎಫ್​ಐಆರ್​ನಲ್ಲಿ ರಾಜ್​​, ಮಹಿಳೆ ಹನಿಟ್ರ್ಯಾಪ್ ಮೂಲಕ ನನಗೆ ವಂಚಿಸಿ 1 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಳು. ಸಾರ್ವಜನಿಕವಾಗಿ ಮಾನಹಾನಿಯಾಗುವ ಭಯದಲ್ಲಿ ನಾನು ಅವರಿಗೆ 2 ಲಕ್ಷ ರೂಪಾಯಿಗಳನ್ನು ನೀಡಿದ್ದೇನೆ. ನನ್ನಿಂದ ಹೆಚ್ಚಿನ ಹಣ ವಸೂಲಿ ಮಾಡಲು ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಲೇ ಇದ್ದಳು ಎಂದು ಪ್ರಿನ್ಸ್ ರಾಜ್ ಆರೋಪಿಸಿದ್ದರು. ಬಳಿಕ ಅವರಿಗೆ ದೆಹಲಿ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img