Sunday, September 19, 2021
Homeಸುದ್ದಿ ಜಾಲಭುವನೇಶ್ವರ: ನದಿಗೆ ಉರುಳಿದ ಗೂಡ್ಸ್ ಬೋಗಿಗಳು

ಇದೀಗ ಬಂದ ಸುದ್ದಿ

ಭುವನೇಶ್ವರ: ನದಿಗೆ ಉರುಳಿದ ಗೂಡ್ಸ್ ಬೋಗಿಗಳು

ಭುವನೇಶ್ವರ: ಅಂಗುಲ್‌-ತಾಲ್‌ಚೇರ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಈಸ್ಟ್‌ಕೋಸ್ಟ್‌ ರೈಲ್ವೆ ವಿಭಾಗದ ಗೂಡ್ಸ್‌ರೈಲಿನ ಆರು ಬೋಗಿಗಳು ಮಂಗಳವಾರ ಮುಂಜಾನೆ ಹಳಿ ತಪ್ಪಿ ನದಿಗೆ ಉರುಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋಧಿಯನ್ನು ಸಾಗಿಸುತ್ತಿದ್ದ ರೈಲಿನ ಆರು ಬೋಗಿಗಳು ಮುಂಜಾನೆ 2.30ರ ಸುಮಾರಿಗೆ ಹಳಿ ತಪ್ಪಿ ನದಿಗೆ ಉರುಳಿವೆ. ಆದರೆ, ರೈಲಿನ ಎಂಜಿನ್‌ ಹಳಿಯ ಮೇಲೆ ಇದ್ದಿದ್ದರಿಂದ, ಲೋಕೊ ಪೈಲಟ್ ಮತ್ತು ಇತರ ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದು ಅವರು ಹೇಳಿದರು.

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಭಾರೀ ಮಳೆಯಾಗುತ್ತಿದ್ದರಿಂದ ಈ ಅಪಘಾತ ಸಂಭವಿಸಿದೆ. ಫಿರೋಜ್‌ಪುರ ದಿಂದ ಖುರ್ದಾ ರಸ್ತೆಯತ್ತ ಹೋಗುತ್ತಿದ್ದ ಈ ಗೂಡ್ಸ್‌ ರೈಲಿನ ಬೋಗಿಗಳು ನಂದಿರಾ ಸೇತುವೆಯ ಮೇಲೆ ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ನಂತರ, ಈಸ್ಟ್‌ಕೋಸ್ಟ್ ರೈಲ್ವೆ ವಿಭಾಗ ಈ ಮಾರ್ಗದಲ್ಲಿ ಸಂಚರಿಸುವ 12 ರೈಲುಗಳನ್ನು ರದ್ದುಗೊಳಿಸಿತು. ಎಂಟು ರೈಲುಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಿತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img