Wednesday, September 22, 2021
Homeತಮಿಳುನಾಡಿನನೀಟ್ ಭೀತಿ: ತಮಿಳುನಾಡಿನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ

ಇದೀಗ ಬಂದ ಸುದ್ದಿ

ನೀಟ್ ಭೀತಿ: ತಮಿಳುನಾಡಿನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ

ಚೆನ್ನೈ (ತಮಿಳುನಾಡು): ಮೊನ್ನೆಯಷ್ಟೇ ನೀಟ್​ (ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ) ಬರೆದಿದ್ದ ವಿದ್ಯಾರ್ಥಿನಿಯೋರ್ವಳು ತೇರ್ಗಡೆ ಹೊಂದುತ್ತೇನೋ ಇಲ್ಲವೋ ಎಂಬ ಭಯದಿಂದ ನೇಣಿಗೆ ಶರಣಾಗಿದ್ದಾಳೆ.

ಅರಿಯಾಲೂರು ಜಿಲ್ಲೆ ಚಿತಂಬಡಿ ಗ್ರಾಮದ ಕನಿಮೋಳಿ ಎಂಬ ವಿದ್ಯಾರ್ಥಿನಿ ವೈದ್ಯಕೀಯ ಕೋರ್ಸ್​ಗೆ ಪ್ರವೇಶ ಪಡೆಯಲು ನೀಟ್ ಪರೀಕ್ಷೆ ಬರೆದಿದ್ದಳು. ಈಕೆ 12ನೇ ತರಗತಿ ಬೋರ್ಡ್​ ಪರೀಕ್ಷೆಯಲ್ಲಿ 562 ಅಂಕಗಳನ್ನು ಗಳಿಸಿ, ತಾನು ಕಲಿತ ಕಾಲೇಜಿನಲ್ಲಿ ಅಗ್ರಸ್ಥಾನ ಪಡೆದಿದ್ದಳು. ಹೆಚ್ಚಿನ ನಿರೀಕ್ಷೆಗಳೊಂದಿಗೆ NEETಗೆ ತಯಾರಾಗಿ, ಸೆಪ್ಟೆಂಬರ್ 12ರಂದು ನಡೆದ ಪರೀಕ್ಷೆಯನ್ನು ಎದುರಿಸಿದ್ದಳು.

“ಪರೀಕ್ಷೆ ಕಠಿಣವಾಗಿತ್ತು. ಹೀಗಾಗಿ ಪರೀಕ್ಷೆ ಚೆನ್ನಾಗಿ ಬರೆಯಲು ಸಾಧ್ಯವಾಗಲಿಲ್ಲ ಎಂದು ಕನಿಮೋಳಿ ಆತಂಕ ವಕ್ತಪಡಿಸಿದ್ದಳು. ಫಲಿತಾಂಶ ಚೆನ್ನಾಗೇ ಬರುತ್ತದೆ, ಹೆದರಬೇಡ ಅಂತ ನಾನು ಅವಳನ್ನು ಸಮಾಧಾನ ಪಡಿಸಿದ್ದೆ. ಆದರೂ ವೈದ್ಯೆಯಾಗುವ ಕನಸು ನನಸಾಗುವುದಿಲ್ಲ ಎಂಬ ಕಾರಣಕ್ಕೆ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಆಕೆಯ ತಂದೆ ಕರುಣಾನಿಧಿ ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img