Sunday, September 19, 2021
Homeಕ್ರಿಕೆಟ್ಕ್ರೀಡೆಫೈನಲ್​​​​​​​ನಲ್ಲಿ ವಿಶ್ವದ ನಂಬರ್​ 1 ಜೊಕೊವಿಕ್​ಗೆ ಆಘಾತಕಾರಿ ಸೋಲು

ಇದೀಗ ಬಂದ ಸುದ್ದಿ

ಫೈನಲ್​​​​​​​ನಲ್ಲಿ ವಿಶ್ವದ ನಂಬರ್​ 1 ಜೊಕೊವಿಕ್​ಗೆ ಆಘಾತಕಾರಿ ಸೋಲು

ನ್ಯೂಯಾರ್ಕ್: ನೋವಾಕ್​ ಜೊಕೊವಿಕ್ ಫೈನಲ್​ನಲ್ಲಿ ಆಘಾತಕಾರಿ ಸೋಲು ಅನುಭವಿಸಿ ನಿರಾಸೆ ಅನುಭವಿಸಿದ್ದಾರೆ. ಯುಎಸ್ ಓಪನ್ ಫೈನಲ್‌ನಲ್ಲಿ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 6-4, 6-4, 6-4 ನೇರ ಸೆಟ್​ಗಳಿಂದ ಸೋಲು ಅನುಭವಿಸಿದ್ದಾರೆ.

ಇನ್ನು ಮೆಡ್ಬೆಡೆವ್​​ ಚೊಚ್ಚಲ ಗ್ರ್ಯಾಂಡ್​ ಸ್ಲಾಮ್​ ಗೆಲ್ಲುವ ಮೂಲಕ ಅಮೆರಿಕನ್​ ಒಪನ್​​​ ಟೆನಿಸ್​ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ. ಮೆಡ್ವೆಡೆವ್​ ಆಶ್ಚರ್ಯಕರ ರೀತಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಜೊಕೊವಿಕ್​ ಅವರನ್ನು ಸೋಲಿಸಿ, ವಿಶ್ವನಂಬರ್​ ಒನ್​ ಆಟಗಾರನ 21 ಗ್ರ್ಯಾಂಡ್​ ಸ್ಲಾಮ್​ ಗೆಲುವಿನ ಆಸೆಗೆ ತಣ್ಣೀರೆರಚಿದ್ದಾರೆ. ಈಗಾಗಲೇ ಟೆನಿಸ್​ ದಿಗ್ಗಜರಾದ ಫೆಡರರ್​ ಹಾಗೂ ನಡಾಲ್​ 20 ಗ್ರ್ಯಾಂಡ್​ ಸ್ಲಾಮ್​​ ಗೆಲ್ಲುವ ಮೂಲಕ ಜೊಕೊವಿಕ್​ ಜತೆ ಸಮಾನ ಸ್ಥಾನ ಹಂಚಿಕೊಂಡಿದ್ದಾರೆ.

21ನೇ ಗ್ರ್ಯಾಂಡ್​ಸ್ಲಾಮ್​ ಗೆಲ್ಲಲು ಆಗದೇ ಇದ್ದರೂ ಎಲ್ಲ ಗ್ರ್ಯಾಂಡ್​ಸ್ಲಾಮ್​ಗಳ ಫೈನಲ್​ ತಲುಪುವ ಮೂಲಕ ದಾಖಲೆ ಬರೆದಿದ್ದಾರೆ. ಮೆಡ್ವೆಡೆವ್​ ಅವರನ್ನು ಜೊಕೊವಿಕ್​ ಆಸ್ಟ್ರೇಲಿಯನ್​ ಓಪನ್​ನಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದಿದ್ದರು. ಅಷ್ಟೇ ಅಲ್ಲ ಜೊಕೊವಿಕ್​ ಫ್ರೆಂಚ್​ ಹಾಗೂ ವಿಂಬಲ್ಡನ್​​ ಒಪನ್​​​ ಗೆಲ್ಲುವ ಮೂಲಕ ನಾಗಾಲೋಟ ಮುಂದುವರಿಸಿದ್ದರು. ಆದರೆ, ಯುಎಸ್​ ಒಪನ್​​ನಲ್ಲಿ ಮೆಡ್ವೆಡೆವ್​​​ ನೊವಾಕ್​ಗೆ ಸೋಲಿನ ರುಚಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img