Wednesday, September 22, 2021
Homeಸುದ್ದಿ ಜಾಲಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರಿಗೆ ಭರ್ಜರಿ ಗುಡ್‌ ನ್ಯೂಸ್

ಇದೀಗ ಬಂದ ಸುದ್ದಿ

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರಿಗೆ ಭರ್ಜರಿ ಗುಡ್‌ ನ್ಯೂಸ್

ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ಪಾಮ್​ ಆಯಿಲ್​, ಸೋಯಾಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ತೆರಿಗೆಗಳನ್ನು ಕಡಿತಗೊಳಿಸಲಾಗಿದೆ. ದೇಶದಲ್ಲಿ ಸಸ್ಯಜನ್ಯ ಎಣ್ಣೆಗಳ ದರವನ್ನು ಕಡಿಮೆ ಮಾಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ತೆರಿಗೆ ಕಡಿತದಿಂದಾಗಿ ಭಾರತದಲ್ಲಿ ಖಾದ್ಯ ತೈಲಗಳ ಬೆಲೆ ಕಡಿಮೆಯಾಗಬಹುದು. ಇದು ದಕ್ಷಿಣ ಏಷ್ಯಾದಲ್ಲಿ ಸಾಗರೋತ್ತರ ಖರೀದಿ ಪ್ರಮಾಣವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲಿದೆ ಎಂದು ಅಂದಾಜಿಸಲಾಗಿದೆ.

ಪಾಮ್​ ಆಯಿಲ್​, ಸೋಯಾಬಿನ್​ ಹಾಗೂ ಸೂರ್ಯಕಾಂತಿ ಎಣ್ಣೆಯ ಮೂಲ ಆಮದು ತೆರಿಗಯನ್ನು 37.5 ಪ್ರತಿಶತದಿಂದ 32.5 ಪ್ರತಿಶತಕ್ಕೆ ಇಳಿಕೆ ಮಾಡಲಾಗಿದೆ.

ತೆರಿಗೆ ಕಡಿತದಿಂದಾಗಿ ಕಚ್ಚಾ ತಾಳೆ ಎಣ್ಣೆ, ಸೋಯಾ ಎಣ್ಣೆ ಹಾಗೂ ಸೋಯಾ ಎಣ್ಣೆಯ ಆಮದುಗಳು 24.75 ಪ್ರತಿಶತ ತೆರಿಗೆಗೆ ಒಳಪಡಲಿದೆ. ಇದರಲ್ಲಿ 2.5 ಪ್ರತಿಶತ ಮೂಲ ಆಮದು ಸುಂಕ ಸೇರಿದಂತೆ ವಿವಿಧ ತೆರಿಗೆಗಳು ಸೇರಿವೆ. ಆದರೆ ಶುದ್ಧೀಕರಿಸಿದ ತಾಳೆ ಎಣ್ಣೆ. ಸೋಯಾ ಎಣ್ಣೆ ಹಾಗೂ ಸೂರ್ಯಕಾತಿ ಎಣ್ಣೆಯು ಒಟ್ಟು 35.75 ಪ್ರತಿಶತ ತೆರಿಗೆ ಹೊಂದಿರಲಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img