Wednesday, September 22, 2021
Homeಸುದ್ದಿ ಜಾಲಅಪೋಲೋ ಆಸ್ಪತ್ರೆಯಿಂದ ನಟ ಸಾಯಿ ಧರಮ್ ತೇಜ್ ಹೆಲ್ತ್ ಬುಲೆಟಿನ್ ಬಿಡುಗಡೆ

ಇದೀಗ ಬಂದ ಸುದ್ದಿ

ಅಪೋಲೋ ಆಸ್ಪತ್ರೆಯಿಂದ ನಟ ಸಾಯಿ ಧರಮ್ ತೇಜ್ ಹೆಲ್ತ್ ಬುಲೆಟಿನ್ ಬಿಡುಗಡೆ

ಹೈದರಾಬಾದ್: ಬೈಕ್ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡು, ಪ್ರಜ್ಞಾಹೀn ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಟಾಲಿವುಡ್ ನಟ ಸಾಯಿ ಧರಮ್ ತೇಜ್ ಆರೋಗ್ಯದ ಬಗ್ಗೆ ಹೈದರಾಬಾದ್ ಅಪೊಲೋ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಸಾಯಿ ಧರಮ್ ತೇಜ್ ಅವರು ಆರೋಗ್ಯದಿಂದಾರೆ. ಆದರೆ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಅವರ ಪ್ರಮುಖ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಧರಮ್ ತೇಜ್ ಆರೋಗ್ಯದ ಮೇಲೆ ವೈದ್ಯರಿಂದ ತೀವ್ರ ನಿಗಾ ಇಡಲಾಗಿದೆ. ಶೀಘ್ರದಲ್ಲಿಯೇ ಚೇತರಿಸಿಕೊಳ್ಳಲಿದ್ದಾರೆ ಎಂದು ಹೆಲ್ತ್ ಬುಲೆಟಿನ್ ನಲ್ಲಿ ವೈದ್ಯರು ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img