Sunday, September 19, 2021
Homeಸುದ್ದಿ ಜಾಲಪೂಜೆಗೆ ಹೂ ತರಲು ಅಣೆಕಟ್ಟೆ ನೀರಿಗಿಳಿದ ಮೂವರು ಬಾಲಕಿಯರ ದುರ್ಮರಣ

ಇದೀಗ ಬಂದ ಸುದ್ದಿ

ಪೂಜೆಗೆ ಹೂ ತರಲು ಅಣೆಕಟ್ಟೆ ನೀರಿಗಿಳಿದ ಮೂವರು ಬಾಲಕಿಯರ ದುರ್ಮರಣ

ಅಣೆಕಟ್ಟೆ ನೀರಿನಲ್ಲಿ ಸ್ನಾನ ಮಾಡುವಾಗ ಮೂವರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಜಾರ್ಖಂಡ್​ನ ಜಮುವಾದ ದಿಯೋರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗಣೇಶೋತ್ಸವದ ಹಿನ್ನೆಲೆಯಲ್ಲಿ ಪೂಜೆಗೆ ಹೂವು ತರಲು ಬಾಲಕಿಯರು ತೆರಳಿದ್ದರು. ಈ ವೇಳೆ ಅಣೆಕಟ್ಟೆ ನೀರಿನಲ್ಲಿ ಸ್ನಾನ ಮಾಡಲು ನಿರ್ಧರಿಸಿದ್ದಾರೆ. ನೀರಿನಲ್ಲಿ ಇಳಿದು ಸ್ನಾನ ಮಾಡಲು ಮುಂದಾದಾಗ ಆಳ ಅರಿಯದೆ ಮೂವರು ಕೂಡಾ ಮುಳುಗಿ ಸಾವನ್ನಪ್ಪಿದರು. ಈಗಾಗಲೇ ಮೂವರ ಮೃತದೇಹ ಹೊರತೆಗೆಯಲಾಗಿದೆ.

ಬಾಲಕಿಯರ ಮೃತದೇಹವನ್ನು ಗ್ರಾಮಕ್ಕೆ ತರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ದಿಯೋರಿ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದು ದೂರು ದಾಖಲಿಸಿಕೊಂಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img