Wednesday, September 22, 2021
Homeಕ್ರಿಕೆಟ್ಇಂದು ನಡೆಯಬೇಕಿದ್ದ 5ನೇ ಟೆಸ್ಟ್ ಪಂದ್ಯ ಮುಂದೂಡಿಕೆ

ಇದೀಗ ಬಂದ ಸುದ್ದಿ

ಇಂದು ನಡೆಯಬೇಕಿದ್ದ 5ನೇ ಟೆಸ್ಟ್ ಪಂದ್ಯ ಮುಂದೂಡಿಕೆ

ಮ್ಯಾಂಚೆಸ್ಟರ್(ಬ್ರಿಟನ್): ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ಮುಂದೂಡಿಕೆಯಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಮ್ಯಾಂಚೆಸ್ಟರ್​ನಲ್ಲಿ ಫೈನಲ್ ಪಂದ್ಯ ನಡೆಯಬೇಕಿತ್ತು.

ಕೋವಿಡ್ ಭೀತಿಯಿಂದಾಗಿ ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇಸಿಬಿ (ECB- ಇಂಗ್ಲೆಂಡ್- ವೇಲ್ಸ್​​ ಕ್ರಿಕೆಟ್ ಮಂಡಳಿ) ಮತ್ತು ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.

ಇಸಿಬಿ ಮತ್ತು ಬಿಸಿಸಿಐ ನಡುವೆ ಸಭೆ ಮುಂದುವರೆದಿದ್ದು, ಪಂದ್ಯದ ದಿನಾಂಕ ಮರು ನಿಗದಿ ಮಾಡುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆಟಗಾರರ ಕೋವಿಡ್ ಸೋಂಕಿನ ಫಲಿತಾಂಶದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img