Sunday, September 19, 2021
Homeಸುದ್ದಿ ಜಾಲಕೋವಿಡ್ ಮಾರ್ಗಸೂಚಿ ಅನುಸರಿಸಿ ಗಣೇಶ ಹಬ್ಬ ಆಚರಣೆ

ಇದೀಗ ಬಂದ ಸುದ್ದಿ

ಕೋವಿಡ್ ಮಾರ್ಗಸೂಚಿ ಅನುಸರಿಸಿ ಗಣೇಶ ಹಬ್ಬ ಆಚರಣೆ

ನವದೆಹಲಿ: ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮಕ್ಕೆ ಕೋವಿಡ್ ಬ್ರೇಕ್ ಹಾಕಿದೆ. ಕೋವಿಡ್ ನಿಯಮಗಳನ್ನು ಅನುಸರಿಸಿ ಸಂಭ್ರಮಾಚರಣೆ ಮಾಡುವಂತೆ ಆಯಾಯ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಿವೆ. ಈ ಹಿನ್ನೆಲೆ ಕಳೆದ ವರ್ಷದಂತೆ ಈ ವರ್ಷವೂ ಸರಳವಾಗಿ ಗಣೇಶೋತ್ಸವ ನಡೆಯಲಿದೆ.

ಮುಂಬೈನ ಪ್ರತಿಷ್ಠಿತ ಸಿದ್ಧಿ ವಿನಾಯಕ ಗಣಪತಿ ದೇಗುಲದಲ್ಲಿ ವಿನಾಯಕ ಚತುರ್ಥಿ ನಿಮಿತ್ತ ಬೆಳಗ್ಗೆಯೇ ವಿಶೇಷ ಪೂಜೆ ನೆರವೇರಿತು. ವಿಶೇಷ ಪೂಜೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಮುಂಬೈನಲ್ಲಿ ಗಣೇಶ ಚತುರ್ಥಿಯು ಬಹುದೊಡ್ಡ ಹಬ್ಬ. ರಾಜ್ಯದಲ್ಲಿ ಕೋವಿಡ್​​​ ಪ್ರಕರಣಗಳು ಹೆಚ್ಚಾಗಿರುವುದರಿಂದ ಸಾರ್ವಜನಿಕ ಆಚರಣೆಗಳನ್ನು ಮಾಡದಂತೆ ಪೊಲೀಸರು ಆದೇಶ ಹೊರಡಿಸಿದ್ದಾರೆ. ಸೆಪ್ಟೆಂಬರ್ 10(ಇಂದಿನಿಂದ) ರಿಂದ 19 ರವರೆಗೆ ನಗರದಲ್ಲಿ 144 ಸೆಕ್ಷನ್​ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಗಣಪತಿಯ ಯಾವುದೇ ಮೆರವಣಿಗೆಗೆ ಅನುಮತಿ ನೀಡಿಲ್ಲ. ಜತೆಗೆ ಐದು ಜನರಿಗಿಂತ ಹೆಚ್ಚು ಜನರು ಒಂದು ಸ್ಥಳದಲ್ಲಿ ಸೇರುವಂತಿಲ್ಲ ಎಂದು ಮುಂಬೈ ಆಯುಕ್ತರ ಕಚೇರಿ ತಿಳಿಸಿದೆ.

ಇದು ನಮಗೆ ಪ್ರಮುಖ ಹಬ್ಬವಾಗಿದೆ. ಆದರೂ, ಕಳೆದ ವರ್ಷ ನಾವು ದೇವಸ್ಥಾನಗಳಿಗೆ ಹೋಗದೇ, ಆನ್​​ಲೈನ್​ನಲ್ಲಿ ಗಣೇಶನ ದರ್ಶನ ಪಡೆಯಬೇಕಿತ್ತು. ಆದ್ದರಿಂದ ಈ ಬಾರಿ ಹಬ್ಬ ಆಚರಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಪುಣೆಯಲ್ಲಿ ಗಣೇಶ ವಿಸರ್ಜನೆಗೆ ವ್ಯಾನ್​ಗಳನ್ನು ಬಳಸಬಹುದು ಎಂದು ನಗರ ಪೊಲೀಸ್ ಜಂಟಿ ಆಯುಕ್ತ ರವೀಂದ್ರ ಶಿಶ್ವೆ ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img