Saturday, September 18, 2021
Homeರಾಜಸ್ಥಾನಲೇಡಿ ಕಾನ್ಸ್​ಟೇಬಲ್​ ಜತೆ ಸ್ವಿಮಿಂಗ್​​ ಪೂಲ್​​ನಲ್ಲಿ DSP ಸರಸ ಸಲ್ಲಾಪ

ಇದೀಗ ಬಂದ ಸುದ್ದಿ

ಲೇಡಿ ಕಾನ್ಸ್​ಟೇಬಲ್​ ಜತೆ ಸ್ವಿಮಿಂಗ್​​ ಪೂಲ್​​ನಲ್ಲಿ DSP ಸರಸ ಸಲ್ಲಾಪ

ಜೈಪುರ್​(ರಾಜಸ್ಥಾನ) : ಆರು ವರ್ಷದ ಮಗನ ಮುಂದೆ ಮಹಿಳಾ ಕಾನ್ಸ್​ಟೇಬಲ್​ ಹಾಗೂ ರಾಜಸ್ಥಾನ ಪೊಲೀಸ್​​ ಸೇವಾ (ಆರ್‌ಪಿಎಸ್) ಅಧಿಕಾರಿ ಅಶ್ಲೀಲದಾಟದಲ್ಲಿ ಭಾಗಿಯಾಗಿರುವ ಘಟನೆ ನಡೆದಿದೆ. ಸುಮಾರು ಎರಡು ನಿಮಿಷಗಳ ವಿಡಿಯೋವೊಂದು ಇದೀಗ ವೈರಲ್​​ ಆಗಿದೆ.

ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿ ಹಾಗೂ ಮಹಿಳಾ ಕಾನ್ಸ್​ಟೇಬಲ್​ ಈಜುಕೊಳದಲ್ಲಿ ಅಶ್ಲೀಲ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಎರಡು ನಿಮಿಷಗಳ ವಿಡಿಯೋ ಇದಾಗಿದೆ. ಪೊಲೀಸ್​ ಅಧಿಕಾರಿ ಹೀರಾಲಾಲ್​ ಸೈನಿ ಇದರಲ್ಲಿ ಭಾಗಿಯಾಗಿದ್ದಾರೆ.

ಇವರು ಅಜ್ಮೀರ್​​ದ ಬೇವಾರ್​​ನಲ್ಲಿ ಡಿಎಸ್​​ಪಿಯಾಗಿ ನೇಮಕಗೊಂಡಿದ್ದರು ಎನ್ನಲಾಗಿದೆ. ಇದೇ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್ಸ್​ಟೇಬಲ್​ ಆಗಿದ್ದ ಮಹಿಳೆ ಇದರಲ್ಲಿ ಭಾಗಿಯಾಗಿದ್ದಳು ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್​ ಆಗುತ್ತಿದ್ದಂತೆ, ರಾಜಸ್ಥಾನ ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ಮಹಿಳಾ ಕಾನ್ಸ್​ಟೇಬಲ್​​ ಅಮಾನತುಗೊಂಡಿದ್ದಾರೆ. ಹೀರಾಲಾಲ್​​ ಸೈನಿಯನ್ನ ಬಂಧನಕ್ಕೊಳಪಡಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img