Sunday, September 19, 2021
Homeಕೋವಿಡ್-19ಡೆಲ್ಟಾ ಉಪ ರೂಪಾಂತರಿ ʼAY3, AY4, AY6ʼ ಪತ್ತೆ

ಇದೀಗ ಬಂದ ಸುದ್ದಿ

ಡೆಲ್ಟಾ ಉಪ ರೂಪಾಂತರಿ ʼAY3, AY4, AY6ʼ ಪತ್ತೆ

ಕೊರೊನಾ 3ನೇ ಅಲೆ ಭೀತಿ ಬೆನ್ನಲ್ಲೇ ಜನರಿಗೆ ಮತ್ತೊಂದು ಆತಂಕ ಶುರುವಾಗಿದ್ದು, ರಾಜ್ಯದಲ್ಲಿ ಕೊರೊನಾದ ಡೆಲ್ಟಾ ಉಪ ರೂಪಾಂತರಿ ಎವೈ3, ಎವೈ4, ಎವೈ6 (AY3, AY4, AY6) ಪತ್ತೆಯಾಗಿವೆ.

ರಾಜ್ಯದಲ್ಲಿ ಈವರೆಗೆ ಹೊಸ ರೂಪಾಂತರಿಯ 400 ಸ್ಯಾಂಪಲ್‌ ಟೆಸ್ಟ್‌ ಮಾಡಲಾಗಿದ್ದು, ಇದರಲ್ಲಿ ಒಂದಿಷ್ಟು ಜನರಿಗೆ ರೂಪಾಂತರಿ ಕಂಡು ಬಂದಿದೆ. ಎವೈ3, ಎವೈ4, ಎವೈ6 ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ ಕೆಲವರು ಡಿಸ್ಚಾರ್ಜ್‌ ಆಗಿದ್ದಾರೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್‌ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವ್ರು, ‘ರಾಜ್ಯದಲ್ಲಿ ಈವರೆಗೂ ಡೆಲ್ಟಾ ಉಪ ರೂಪಾಂತರಿಯಿಂದ ಯಾರೊಬ್ಬರೂ ಮೃತಪ್ಟಿಲ್ಲ. ಇನ್ನೀದು ಕ್ಲಸ್ಟರ್‌ ಮಟ್ಟದಲ್ಲಿ ಹರಡುತ್ತಿದೆಯಾ ಎಂಬ ತಪಾಸಣೆ ನಡೆಯುತ್ತಿದೆ. ಇನ್ನು ಬಿ.1.617.1 ಕಪ್ಪಾ ಪ್ರಭೇದ ಇಬ್ಬರಲ್ಲಿ ಪತ್ತೆಯಾಗಿದ್ರೆ, ಮೂವರಲ್ಲಿ ಡೆಲ್ಟಾ ಉಪ ರೂಪಾಂತರಿ ಎವೈ3 ಪತ್ತೆಯಾಗಿದೆ. ಇನ್ನು ನಾಲ್ವರಲ್ಲಿ ಡೆಲ್ಟಾ ಉಪ ರೂಪಾಂತರಿ ಎವೈ4 ಪತ್ತೆಯಾಗಿದ್ರೆ, 38 ಜನರಲ್ಲಿ ಡೆಲ್ಟಾ ಉಪ ರೂಪಾಂತರ ಎವೈ6 ಪತ್ತೆಯಾಗಿದೆ. ಇನ್ನೂ16 ಜನರಲ್ಲಿ ಕೊರೊನಾದ ಇತರ ತಳಿಗಳು ಪತ್ತೆಯಾಗಿವೆ’ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img