Sunday, September 19, 2021
Homeಸುದ್ದಿ ಜಾಲಗಣೇಶನ ವಿಗ್ರಹ ಮನೆಗೆ ತಂದ ಶಿಲ್ಪಾ ಶೆಟ್ಟಿ

ಇದೀಗ ಬಂದ ಸುದ್ದಿ

ಗಣೇಶನ ವಿಗ್ರಹ ಮನೆಗೆ ತಂದ ಶಿಲ್ಪಾ ಶೆಟ್ಟಿ

ಮುಂಬೈ: ಬಾಲಿವುಡ್​ ಬೆಡಗಿ ನಟಿ ಶಿಲ್ಪಾ ಶೆಟ್ಟಿ ಪ್ರತಿ ವರ್ಷ ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಬಾರಿ ಒಂದು ದಿನ ಮುಂಚಿತವಾಗಿ ಮುಂಬೈನ ಲಾಲ್​ಬಾಗ್​​ ಗಣಪತಿ ವರ್ಕ್​ ಶಾಪ್​ನಲ್ಲಿ ಮೂರ್ತಿ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಗಣಪನ ಮೂರ್ತಿ ಖರೀದಿಸಿದ ಶಿಲ್ಪಾಶೆಟ್ಟಿ, ಬಳಿಕ ಗಣಪತಿ ಬಪ್ಪಾ ಮೋರಯಾ ಜಯಘೋಷ ಹಾಕಿದರು. ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ ಶಿಲ್ಪಾಶೆಟ್ಟಿ ಪುತ್ರ ವಿಹಾನ್​ ಗಣಪನನ್ನು ಮನೆಗೆ ಬರಮಾಡಿಕೊಂಡಿದ್ದು, ನಾಳೆ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ಮಾಡಲಿದ್ದಾರೆ. ಶಿಲ್ಪಾ ಶೆಟ್ಟಿ ಮದುವೆಯಾದ ಬಳಿಕ ಇದೇ ಮೊದಲ ಬಾರಿಗೆ ಪತಿ ರಾಜ್​ ಕುಂದ್ರಾ ಇಲ್ಲದೇ ಗಣೇಶ ಹಬ್ಬ ಆಚರಿಸುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img