Wednesday, September 22, 2021
Homeಸುದ್ದಿ ಜಾಲಡ್ರಗ್ಸ್ ಕೇಸ್: ಇಡಿ ವಿಚಾರಣೆಗೆ ಹಾಜರಾದ ಟಾಲಿವುಡ್ ನಟ ರವಿತೇಜ

ಇದೀಗ ಬಂದ ಸುದ್ದಿ

ಡ್ರಗ್ಸ್ ಕೇಸ್: ಇಡಿ ವಿಚಾರಣೆಗೆ ಹಾಜರಾದ ಟಾಲಿವುಡ್ ನಟ ರವಿತೇಜ

ಡ್ರಗ್ಸ್​ ಪ್ರಕರಣ​(Drugs Case) ಸಂಬಂಧ ಟಾಲಿವುಡ್​ ಮಾಸ್​ ಮಹಾರಾಜ್​ ಖ್ಯಾತಿಯ ನಟ ರವಿತೇಜ ಇಂದು ಇಡಿ ವಿಚಾರಣೆಗೆ ಹಾಜರಾಗಿದ್ದಾರೆ. ಇವರ ಜೊತೆ ಸಹಾಯಕ ಮತ್ತು ಕಾರು ಚಾಲಕ ಶ್ರೀನಿವಾಸ್ ಇಡಿ ಕಚೇರಿಯಲ್ಲಿ ವಿಚಾರಣೆ ಎದುರಿಸಿದ್ದಾರೆ.

ಇದಕ್ಕೂ ಮೊದಲು ರವಿತೇಜ ಅವರಿಗೆ ಇಡಿ ಅಕ್ರಮ ಹಣ ವರ್ಗಾವಣೆ ಹಾಗೂ ಡ್ರಗ್ಸ್​​​ ಕೇಸ್ ಸಂಬಂಧ ನೋಟಿಸ್ ನೀಡಿತ್ತು. 2017ರಲ್ಲಿ ದಾಖಲಾದ ಈ ಪ್ರಕರಣ ಸಂಬಂಧ ಈಗಾಗಲೇ ಹಲವರ ವಿಚಾರಣೆ ನಡೆಸಿರುವ ಇಡಿ, ನಟ ರವಿತೇಜಾ ಸೇರಿದಂತೆ ಒಟ್ಟು 12 ಮಂದಿಗೆ ನೋಟಿಸ್ ನೀಡಿತ್ತು.

ಡ್ರಗ್ಸ್​ ಸರಬರಾಜು ಮಾಡಿರುವ ಆರೋಪ ಎದುರಿಸುತ್ತಿರುವ ಕೆವಿನ್​ ಸಹ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ಈವರೆಗೆ ಇಡಿ ಇಲಾಖೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್​, ನಟಿಯರಾದ ಚಾರ್ಮಿ, ರಕುಲ್ ಪ್ರೀತ್ ಸಿಂಗ್ ಮತ್ತು ನಟ ರಾಣಾ ದಗ್ಗುಬಾಟಿಯನ್ನು ವಿಚಾರಣೆ ನಡೆಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img