Sunday, September 19, 2021
Homeಸುದ್ದಿ ಜಾಲಸಿಪಿಐಎಂ ಕಚೇರಿಗೆ ಬೆಂಕಿ..

ಇದೀಗ ಬಂದ ಸುದ್ದಿ

ಸಿಪಿಐಎಂ ಕಚೇರಿಗೆ ಬೆಂಕಿ..

ಅಗರ್ತಲಾ (ತ್ರಿಪುರ): ಇಲ್ಲಿನ ದನ್​ಪುರ್​ ಪ್ರದೇಶದಲ್ಲಿ ಸಿಪಿಐ(ಎಂ) ಹಾಗೂ ಬಿಜೆಪಿ ನಡುವೆ ಘರ್ಷಣೆ ಉಂಟಾಗಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಸ್ಥಳದಲ್ಲಿನ ಸಿಪಿಐಎಂ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಎರಡು ವಾಹನಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.

ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿರುವ ಸಿಪಿಐಎಂ, ನಗರದಲ್ಲಿ ಬಿಜೆಪಿ ಶಾಂತಿ ಹಾಳುಗೆಡುವ ಕಾರ್ಯ ಮಾಡುತ್ತಿದೆ ಎಂದಿದೆ. ಸಿಪಿಐಎಂ ಕಚೇರಿ ಮುಂಭಾಗ ಹಲವು ಕಾರ್ಯಕರ್ತರು ಕಲ್ಲು ತೂರಿದ್ದಾರೆ. ಜೊತೆಗೆ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಬಿಜೆಪಿ ಕಾರ್ಯಕರ್ತರು ಸಿಪಿಐಎಂ ನಮ್ಮ ಮೇಲೆ ದಾಳಿಗೆ ಮುಂದಾಗಿದೆ. ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಸಿಪಿಐಎಂ ಷಡ್ಯಂತ್ರ ನಡೆಸುತ್ತಿದೆ ಎಂದು ಬಿಜೆಪಿ ಉಪಾಧ್ಯಕ್ಷ ರಜಿಬ್ ಭಟ್ಟಾಚರ್ಜಿ ಪ್ರತ್ಯಾರೋಪ ಮಾಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img