Wednesday, September 22, 2021
Homeಸುದ್ದಿ ಜಾಲಬೊಮ್ಮಾಯಿ ಹಿಂದೆ ಸೂತ್ರಧಾರಿ ಇದ್ದಾರೆ: ಕೋಡಿಶ್ರೀ ಭವಿಷ್ಯ

ಇದೀಗ ಬಂದ ಸುದ್ದಿ

ಬೊಮ್ಮಾಯಿ ಹಿಂದೆ ಸೂತ್ರಧಾರಿ ಇದ್ದಾರೆ: ಕೋಡಿಶ್ರೀ ಭವಿಷ್ಯ

ಹಾಸನ: ಸ್ವಾಮೀಜಿಗಳ ಮಾತನ್ನು ಧಿಕ್ಕರಿಸಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದಾರೆ. ಸದ್ಯದಲ್ಲೇ ಅದರ ಫಲವನ್ನು ಅವರು ಉಣ್ಣುತ್ತಾರೆ. ಬೊಮ್ಮಾಯಿ ಹಿಂದೆ ಸೂತ್ರಧಾರಿ ಯಡಿಯೂರಪ್ಪನವರು ಇದ್ದಾರೆ. ಸರ್ಕಾರಕ್ಕೆ ಏನೂ ತೊಂದರೆ ಇಲ್ಲ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಮಾಡಾಳು ಗೌರಮ್ಮನ ನಿಮಜ್ಜನಾ ಕಾರ್ಯಕ್ರಮದ ಬಳಿಕ ಬಿಎಸ್​ವೈ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಭಾರತ ಸಾಧು ಸಂತರನ್ನ, ಪೂಜೆ ವಿಧಿ-ವಿಧಾನ, ಜಪ-ತಪಗಳನ್ನು ನಂಬಿರುವ ದೇಶ. ಸ್ವಾಮೀಜಿಗಳು ಯಡಿಯೂರಪ್ಪರನ್ನ ಉಳಿಸಿ ಅಂತ ಬಂದಿದ್ದಿಲ್ಲ. ಕೊರೊನಾ ಕೆಟ್ಟ ಕಾಲದಲ್ಲಿ ಅವರನ್ನ ಕೆಳಗಿಳಿಸೋದು ಬೇಡ ಅಂತ ಕೇಳಲು ಬೆಂಗಳೂರಿಗೆ ಬಂದಿದ್ದೆವು. ಆದರೆ ಸ್ವಾಮೀಜಿ ಮಾತುಗಳನ್ನ ಧಿಕ್ಕರಿಸಲಾಗಿದೆ ಎಂದರು. ಅವರನ್ನು ಅಧಿಕಾರದಿಂದ ಕೆಳಗಿಳಿಸಿದವರು ಸಂಕಷ್ಟ ಎದುರಾಗಲಿದೆ. ಅದು ಹೇಗೆ ಅಂತ ಈಗ ಹೇಳಲ್ಲ ಎಲ್ಲಾ ಕಾದು ನೋಡಿ ಎಂದು ಬಿಜೆಪಿ ಹೈಕಮಾಂಡ್​ಗೆ ಕೆಟ್ಟದಿನಗಳು ಕಾದಿವೆ ಎಂಬ ಸೂಚನೆ ನೀಡಿದರು. ಅಲ್ಲದೆ, ಸೂತ್ರಧಾರಿ ಯಡಿಯೂರಪ್ಪನವರು ಇರುವವರೆಗೂ, ಬೊಮ್ಮಾಯಿ ಎನ್ನುಯಿ ಬೊಂಬೆ ಕುಣಿಯುತ್ತದೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ನುಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img