Wednesday, September 22, 2021
Homeಸುದ್ದಿ ಜಾಲತಿರುಮಲದಲ್ಲಿ ಸರ್ವ ದರ್ಶನ ಟೋಕನ್​ ನೀಡಿಕೆ ಪುನಾರಂಭ

ಇದೀಗ ಬಂದ ಸುದ್ದಿ

ತಿರುಮಲದಲ್ಲಿ ಸರ್ವ ದರ್ಶನ ಟೋಕನ್​ ನೀಡಿಕೆ ಪುನಾರಂಭ

ತಿರುಪತಿ(ಆಂಧ್ರಪ್ರದೇಶ): ಕೆಲವು ತಿಂಗಳುಗಳಿಂದ ತಿರುಪತಿಯ ತಿರುಮಲದಲ್ಲಿ ಸ್ಥಗಿತಗೊಳಿಸಲಾಗಿದ್ದ ಶ್ರೀವೆಂಕಟಶ್ವರನ ಸರ್ವದರ್ಶನ ಟೋಕನ್​​ಗಳನ್ನು ನೀಡಲು ಟಿಟಿಡಿ ( ತಿರುಮಲ-ತಿರುಪತಿ ದೇವಸ್ಥಾನಂ) ಪುನಾರಂಭಿಸಿದೆ. ಆದರೆ, ವೆಂಕಟೇಶ್ವರ ಸ್ವಾಮಿಯ ಸರ್ವದರ್ಶನ ಅವಕಾಶ ಕೇವಲ ಚಿತ್ತೂರು ಜಿಲ್ಲೆಯ ಜನರಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಕೊರೊನಾ ಹಾವಳಿಯ ಕಾರಣಕ್ಕೆ ಏಪ್ರಿಲ್ 11ರಿಂದ ಸರ್ವದರ್ಶನ ಟೋಕನ್​ಗಳನ್ನು ನೀಡುವುದನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ ಸರ್ವದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ.

ಈಗಾಗಲೇ ವಿಶೇಷ ಪ್ರವೇಶ ದರ್ಶನ ಟಿಕೆಟ್ ಪಡೆದ ಭಕ್ತರಿಗೆ ಸರ್ವದರ್ಶನ ಟೋಕನ್​ಗಳನ್ನು ನೀಡಲು ಟಿಟಿಡಿ ನಿರಾಕರಿಸಿದೆ. ಒಂದು ತಿಂಗಳ ಅವಧಿಗೆ ಟೋಕನ್​ಗಳನ್ನು ಈಗ ಸದ್ಯಕ್ಕೆ ನೀಡಲಾಗುತ್ತಿದೆ.

ಮಂಗಳವಾರ 21,362 ಭಕ್ತರು ಶ್ರೀವೆಂಕಟೇಶ್ವರ ಸನ್ನಿಧಿಗೆ ಬಂದಿದ್ದು, 9,762 ಮಂದಿ ಹರಕೆ ಒಪ್ಪಿಸಿದ್ದಾರೆ. ಸುಮಾರು 2.17 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಟಿಟಿಡಿ ಅಧಿಕೃತ ಮಾಹಿತಿ ನೀಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img