Wednesday, September 22, 2021
Homeರಾಜಕೀಯಪ್ರತ್ಯೇಕ ನಿವಾಸಕ್ಕಾಗಿ ಸಿಎಂಗೆ ಪತ್ರ ಬರೆದು ಮನವಿ : ಸ್ಪೀಕರ್ ಕಾಗೇರಿ

ಇದೀಗ ಬಂದ ಸುದ್ದಿ

ಪ್ರತ್ಯೇಕ ನಿವಾಸಕ್ಕಾಗಿ ಸಿಎಂಗೆ ಪತ್ರ ಬರೆದು ಮನವಿ : ಸ್ಪೀಕರ್ ಕಾಗೇರಿ

ಬೆಂಗಳೂರು : ಅಗತ್ಯಕ್ಕೆ ತಕ್ಕಂತೆ ಎಲ್ಲಾ ಸೌಲಭ್ಯ ಇಟ್ಟುಕೊಳ್ಳಬೇಕು. ನಮಗೆ ಬೇಕಾದ ಹಾಗೆ ಮಾಡಿಕೊಳ್ಳುವುದಲ್ಲ ಎಂದು ಸರ್ಕಾರಿ ನಿವಾಸಗಳ ನವೀಕರಣ ವಿಚಾರದ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಭಾಪತಿ ಹಾಗೂ ಸಭಾಧ್ಯಕ್ಷರಿಬ್ಬರು ನಿವಾಸಗಳ ಕೊರತೆ ಬಗ್ಗೆ ಸರ್ಕಾರಕ್ಕೆ ಹೇಳಿದ್ದೇವೆ. ಮುಖ್ಯಮಂತ್ರಿ ಒಳಗೊಂಡಂತೆ ಸಚಿವರಿಗೆ ಸರ್ಕಾರಿ ನಿವಾಸ ಇರಬೇಕು. ಅದರಂತೆ ಸಭಾಪತಿ ಹಾಗೂ ಸಭಾಧ್ಯಕ್ಷರಿಗೂ ಪ್ರತ್ಯೇಕ ವಸತಿ ಗೃಹ ಇದ್ದರೆ ಒಳ್ಳೆಯದು. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಯಾರ್ಯಾರ ವಾಸ್ತು ಹೇಗಿದೆ ಎಂದು ನೋಡಿದ್ದೇವೆ. ವಾಸ್ತು ಬದಲಾವಣೆ ಮಾಡಿಕೊಂಡರೂ ಯಾರೂ ಇಲ್ಲಿ ಖಾಯಂ ಆಗಿ ಉಳಿದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಆಯಾ ಸಚಿವರುಗಳಿಗೆ ಕ್ವಾಟರ್ಸ್​ ಮಾಡುವಂತೆ ಮನವಿ ಮಾಡಿದ್ದೇವೆ. ಸಿಎಂ ಈ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ನಾವು ಸಾರ್ವಜನಿಕ ಕ್ಷೇತ್ರದಲ್ಲಿರುವರು. ನಮ್ಮ ಅಗತ್ಯತೆ ಅಂದುಕೊಂಡು ಏನೇ ಮಾಡಿಕೊಂಡರೂ ಯಾವಾಗ ಬರಬೇಕೋ ಬರುತ್ತದೆ. ಯಾವಾಗ ಹೋಗಬೇಕೋ ಅವಾಗ ಹೋಗುತ್ತದೆ. ಈ ನಂಬಿಕೆ ಇದ್ದರೆ ಎಲ್ಲದೂ ಸರಳವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img