Sunday, September 19, 2021
Homeಸುದ್ದಿ ಜಾಲಹೃದಯಾಘಾತದಿಂದ ಸಿಐಎಸ್ಎಫ್ ಯೋಧ ನಿಧನ

ಇದೀಗ ಬಂದ ಸುದ್ದಿ

ಹೃದಯಾಘಾತದಿಂದ ಸಿಐಎಸ್ಎಫ್ ಯೋಧ ನಿಧನ

ಚಿಕ್ಕೋಡಿ : ಹೈದರಾಬಾದ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಐಎಸ್ಎಫ್ ಯೋಧ ಸೋಮಪ್ಪಾ ಕುಂಬಾರ ಭಾನುವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು ಅವರ ಅಂತ್ಯಕ್ರಿಯೆಯನ್ನು ಹುಟ್ಟೂರಿನ ಪಾಶ್ಚಾಪೂರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಯಿತು.

ಗ್ರಾಮದ ಬೃಂದಾವನ ಹೋಟೆಲ್​ನಿಂದ ಅಶೋಕ ಸ್ತಂಭದವರೆಗೆ ಮೆರವಣಿಗೆ ನಡೆಸಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಯೋಧನ ಹುಟ್ಟೂರು ಸವದತ್ತಿ ತಾಲೂಕು ಜೀವಾಪೂರ. ಆದರೆ, ಕಳೆದ ಕೆಲವು ವರ್ಷದಿಂದ ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮದಲ್ಲಿ ಅವರು ಬಂದು ನೆಲೆಸಿದ್ದಾರೆ. ಹೀಗಾಗಿ, ಪಾಶ್ಚಾಪೂರ ಗ್ರಾಮದಲ್ಲೇ ಅಂತ್ಯ ಸಂಸ್ಕಾರ ಜರುಗಿತು.

ಮೃತ ವೀರಯೋಧನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನೇನು ಕೆಲವು ತಿಂಗಳುಗಳಲ್ಲಿ ಸೈನ್ಯದಿಂದ ಸೇವಾ ನಿವೃತ್ತಿ ಹೊಂದಿ ಮರಳಿ ಬರಬೇಕಾಗಿದ್ದ ಯೋಧ ಶವವಾಗಿ ಬಂದಿದ್ದರಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.

ಯಮಕನಮರಡಿ ಪಿಎಸ್​ಐ ನ್ಯಾಮಗೌಡ ಹಾಗೂ ಸಿಐಎಸ್​ಎಫ್ ಅಧಿಕಾರಿಗಳು, ನಿವೃತ್ತ ಸೈನಿಕರು ಹಾಗೂ ಪಾಚ್ಚಾಪುರ ಉಪಠಾಣೆಯ ಎಎಸ್‌ಐ ಮುಲ್ಲಾ ಹಾಗೂ ಪೊಲೀಸ್ ಸಿಬ್ಬಂದಿ, ಜನಪ್ರತಿನಿಧಿಗಳು, ಸೋಮಪ್ಪ ಕುಂಬಾರ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img