Sunday, September 19, 2021
Homeಪಶ್ಚಿಮ ಬಂಗಾಳಬಂಧನಕ್ಕೆ ಒಳಗಾದ ಕಡಬದ ಯುವಕನಿಗೆ ಜಾಮೀನು ಮಂಜೂರು

ಇದೀಗ ಬಂದ ಸುದ್ದಿ

ಬಂಧನಕ್ಕೆ ಒಳಗಾದ ಕಡಬದ ಯುವಕನಿಗೆ ಜಾಮೀನು ಮಂಜೂರು

ಕಡಬ(ದಕ್ಷಿಣ ಕನ್ನಡ): ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಪಶ್ಚಿಮ ಬಂಗಾಳದ ಯುವತಿಯೊಬ್ಬಳು ಇನ್​​ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಪೊಲೀಸರಿಂದ ಬಂಧಿತನಾಗಿದ್ದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಯುವಕನಿಗೆ ಅಲ್ಲಿನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಕೋಲ್ಕತ್ತಾದ ಲೇಕ್ ಟೌನ್ ಪೊಲೀಸ್ ಸ್ಟೇಷನಲ್ಲಿ ಯುವತಿ ನೀಡಿದ ದೂರಿನನ್ವಯ, ಸೈಬರ್ ಕ್ರೈಂ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ, ಕೋಲ್ಕತ್ತಾ ಪೊಲೀಸರು ಸೆಕ್ಷನ್ 354, 272, 500, 506, 507, 509 ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಪಶ್ಚಿಮ ಬಂಗಾಳದ ಉತ್ತರ ಪರಗಣದ ನ್ಯಾಯಾಲಯವು ನೂಜಿಬಾಳ್ತಿಲ ನಿವಾಸಿ ಸಂಜಯ್ ಕೃಷ್ಣನ ಬಂಧನಕ್ಕೆ ವಾರಂಟ್ ಹೊರಡಿಸಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಸಂಜಯ್ ಕೃಷ್ಣ ಬಳಸುತ್ತಿದ್ದ ಮೊಬೈಲ್ ನೆಟ್‌ವರ್ಕ್ ಅನ್ನು ಟ್ರ್ಯಾಕ್ ಮಾಡಿ ಕಡಬಕ್ಕೆ ಆಗಮಿಸಿದ ಕೋಲ್ಕತ್ತಾ ಪೊಲೀಸ್ ಅಧಿಕಾರಿ ಎಸ್.ಕೆ ತಾಜುದ್ದೀನ್ ನೇತೃತ್ವದ ಪೊಲೀಸರ ತಂಡವು ಬಸ್​​​ನಲ್ಲಿ ಬರುತ್ತಿದ್ದ ಆರೋಪಿಯನ್ನು ಕಡಬದಲ್ಲಿ ಬಂಧಿಸಿ ಬಳಿಕ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಈ ಬಗ್ಗೆ ಕೋಲ್ಕತ್ತಾ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕಾರಣ ಪುತ್ತೂರು ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಬಳಿಕ ಪಶ್ಚಿಮ ಬಂಗಾಳಕ್ಕೆ ಸಂಜಯ್ ಕೃಷ್ಣನನ್ನು ಕರೆದುಕೊಂಡು ಹೋದ ಪೊಲೀಸರು ಸೆ.7ರಂದು ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯು ಮೇಲ್ನೋಟಕ್ಕೆ ನಿರಪರಾಧಿ ಎಂದು ವಾದಿಸುವಲ್ಲಿ ಸಂಜಯ್ ಕೃಷ್ಣ ಪರ ವಕೀಲರು ಸಫಲರಾದ ಹಿನ್ನೆಲೆಯಲ್ಲಿ ಆರೋಪಿಗೆ ಷರತ್ತುಬದ್ದ ಜಾಮೀನು ಮಂಜೂರಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img