Sunday, September 19, 2021
Homeಜಿಲ್ಲೆಮಂಡ್ಯಅಧಿಕಾರಿಗಳ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಗರಂ

ಇದೀಗ ಬಂದ ಸುದ್ದಿ

ಅಧಿಕಾರಿಗಳ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಗರಂ

ಮಂಡ್ಯ: ಸರ್ಕಾರದಿಂದ ಸಂಬಳವನ್ನು ತೆಗೆದುಕೊಳ್ಳುತ್ತಿದ್ದೀರಿ, ನಿಮಗೆ ಸ್ವಲ್ಪನಾದ್ರೂ ಮಾನ ಮರ್ಯಾದೆ ಇಲ್ವಾ ಎಂದು ಅಧಿಕಾರಿಗಳಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

ಶಾಸಕ ರವೀಂದ್ರ ಶ್ರೀಕಂಠಯ್ಯ ಶ್ರೀರಂಗಪಟ್ಟಣ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ವೇಳೆ ಸರ್ವೇ ಇಲಾಖೆ ಸೂಪರ್ ವೈಸರ್ ಸುರೇಶ್​ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇರುವ ದಾಖಲೆಗಳನ್ನು ಕಳೆದುಕೊಂಡಿದ್ದೀರಿ. ಜನರು ದಾಖಲೆ ಕೇಳಿದರೆ ಸುಲಿಗೆ ಮಾಡುತ್ತೀರಾ ಎಂದು ಸರ್ವೇ ಇಲಾಖೆ ಸೂಪರ್‌ವೈಸರ್ ಸುರೇಶ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇ ವೇಳೆ ಅವರು, ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅವರ ಮೇಲೂ ಗರಂ ಆಗಿದ್ದಾರೆ. ಹಿರಿಯ ಅಧಿಕಾರಿಗಳಾಗಿ ನೀವು ಏನು ಮಾಡುತ್ತಿದ್ದೀರಿ? ನಿಮ್ಮ ಸಿಬ್ಬಂದಿಯನ್ನ ದರೋಡೆ ಮಾಡಲು ಜನರ ಮೇಲೆ ಬಿಟ್ಟಿದ್ದೀರಾ? ನೀವು ಕೇಂದ್ರ ಕಚೇರಿಯಲ್ಲಿ ಕುಳಿತು ಏನು ಮಾಡುತ್ತಿದ್ದೀರಿ. ತಾಲೂಕು ಕಚೇರಿಗೆ ಒಮ್ಮೆಯಾದರೂ ಭೇಟಿ ನೀಡಿದ್ದೀರಾ? ನೀವು ಭೇಟಿ ನೀಡಿ ಪರಿಶೀಲನೆ ನಡೆಸಿದ್ರೆ ಹೀಗೆ ಆಗುತ್ತಿತ್ತಾ ಎಂದು ಹಿರಿಯ ಅಧಿಕಾರಿಗಳ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ.

ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮಾಡಿರೋದು. ಅದಕ್ಕೆ ಬೀಗ ಹಾಕಿದರೆ ಏನು ಅರ್ಥ ಅಂತಾ ಹಿರಿಯ ಅಧಿಕಾರಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಶೌಚಾಲಯ ಬೀಗ ಓಪನ್ ಮಾಡಿಸುತ್ತೇವೆ ಎಂದರು. ಅದಕ್ಕೆ ಮತ್ತೆ ಗರಂ ಆದ ಶಾಸಕರು, ಓಪನ್ ಮಾಡ್ಸೋದು ಅಲ್ಲ ಸ್ವಚ್ಚವಾಗಿಟ್ಟುಕೊಳ್ಳಿ. ಈ ರೀತಿ ಮತ್ತೆ ಪುನರಾವರ್ತನೆಯಾಗಬಾರದು ಎಂದು ಸೂಚಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img