Wednesday, September 22, 2021
Homeಅಂತರ್ ರಾಜ್ಯ​ಅಫ್ಘಾನಿಸ್ತಾನಪಾಕ್​​ ಐಎಸ್​ಐ ಮುಖ್ಯಸ್ಥನಿಂದ ಮುಲ್ಲಾ ಬರದಾರ್ ಭೇಟಿ

ಇದೀಗ ಬಂದ ಸುದ್ದಿ

ಪಾಕ್​​ ಐಎಸ್​ಐ ಮುಖ್ಯಸ್ಥನಿಂದ ಮುಲ್ಲಾ ಬರದಾರ್ ಭೇಟಿ

ಇಸ್ಲಾಮಾಬಾದ್, ಪಾಕಿಸ್ತಾನ: ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಯಲ್ಲಿ ವಿಳಂಬವಾದ ನಿಟ್ಟಿನಲ್ಲಿ ಪಾಕಿಸ್ತಾನ ಗೂಢಚಾರ ಸಂಸ್ಥೆ ಐಎಸ್​ಐ (ಇಂಟರ್​ ಸರ್ವೀಸ್ ಇಂಟೆಲಿಜೆನ್ಸ್​​) ಮುಖ್ಯಸ್ಥ ಲೆಫ್ಟಿನೆಂಟ್ ಫೈಜ್ ಹಮೀದ್​ ತಾಲಿಬಾನಿ ನಾಯಕರನ್ನು ಭೇಟಿಯಾಗಿರುವುದಾಗಿ ತಾಲಿಬಾನ್ ದೃಢಪಡಿಸಿದೆ.

ಐಎಸ್​ಐನ ಫೈಜ್ ಹಮೀದ್​ ತಾಲಿಬಾನ್ ನಾಯಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಅನ್ನು ಭೇಟಿಯಾಗಿ ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕಾಬೂಲ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿ ನಡೆಸಿದ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ‘ಐಎಸ್‌ಐ ಮುಖ್ಯಸ್ಥ ಕಾಬೂಲ್‌ಗೆ ಭೇಟಿ ನೀಡಿ ಮುಲ್ಲಾ ಬರದಾರ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ, ಆಫ್ಘನ್ ಪ್ರದೇಶವನ್ನು ಪಾಕಿಸ್ತಾನದ ವಿರುದ್ಧ ಬಳಸುವುದಿಲ್ಲ ಎಂದು ತಾಲಿಬಾನ್ ಪಾಕಿಸ್ತಾನಕ್ಕೆ ಭರವಸೆ ನೀಡಿದೆ’ ಎಂದಿದ್ದಾರೆ.

ಈ ಹಿಂದೆ, ಪಾಕಿಸ್ತಾನದ ಮಾಧ್ಯಮವೊಂದು ಫೈಜ್ ಹಮೀದ್ ನೇತೃತ್ವದ ಹಿರಿಯ ಅಧಿಕಾರಿಗಳ ನಿಯೋಗವು ತಾಲಿಬಾನ್​ನ ಆಹ್ವಾನದ ಮೇರೆಗೆ ಕಾಬೂಲ್​ಗೆ ತೆರಳಿದೆ ಎಂದು ವರದಿ ಮಾಡಿತ್ತು. ಇದು ಭಾರತ ಸೇರಿದಂತೆ ಜಗತ್ತಿನ ಕೆಲವು ರಾಷ್ಟ್ರಗಳಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img