Wednesday, September 22, 2021
Homeಸುದ್ದಿ ಜಾಲಗಣೇಶ ಚತುರ್ಥಿ - ಮೊಹರಂ ವೇಳೆ ಶಾಂತಿ ಕಾಪಾಡಲು ಕರೆ: ಕಮಲ್ ಪಂತ್ ಸೂಚನೆ

ಇದೀಗ ಬಂದ ಸುದ್ದಿ

ಗಣೇಶ ಚತುರ್ಥಿ – ಮೊಹರಂ ವೇಳೆ ಶಾಂತಿ ಕಾಪಾಡಲು ಕರೆ: ಕಮಲ್ ಪಂತ್ ಸೂಚನೆ

ಬೆಂಗಳೂರು: ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬ ಆಗಮಿಸುತ್ತಿದೆ. ಸದ್ಯ ಈ ಎರಡೂ ಹಬ್ಬಗಳನ್ನ ಆಚರಿಸಲು ಸರ್ಕಾರ ‌ನಿಯಮಗಳನ್ನ ಹೊರಡಿಸಿದ್ದು, ಷರತ್ತು ಬದ್ಧವಾಗಿ ಹಬ್ಬ ಆಚರಿಸಲು ಅನುಮತಿ ನೀಡಿದೆ. ಇದೇ ರೀತಿ ಪೊಲೀಸ್​ ಇಲಾಖೆ ಕೂಡ ಹಬ್ಬ ಆಚರಿಸಲು ಹಲವು ನಿಯಮ ಜಾರಿಗೆ ಮುಂದಾಗಿದೆ.

ಸೆಪ್ಟೆಂಬರ್​​ನಲ್ಲಿ ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬ ಹಿನ್ನೆಲೆ, ಧಾರ್ಮಿಕ ಮುಖಂಡರ ಸಭೆ, ಶಾಂತಿ ಪಾಲನ ಸಭೆ ನಡೆಸುವಂತೆ ನಗರ ಡಿಸಿಪಿಗಳಿಗೆ ನಗರ ಕಮಿಷನರ್ ಸೂಚನೆ ನೀಡಿದ್ದಾರೆ. ಸರ್ಕಾರದ ಆದೇಶದಂತೆ ಗಣೇಶ ಚತುರ್ಥಿ, ‌ಮೊಹರಂ ಇನ್ನಿತರ ಹಬ್ಬಗಳ ಆಚರಣೆ ನಡೆಸುವ ಮುಖಂಡರ ಸಭೆ ನಡೆಸುವಂತೆ ಸೂಚನೆ ನೀಡಲಾಗಿದೆ.

ಕೋವಿಡ್ ಮಾರ್ಗಸೂಚಿ ಎರಡೂ ಹಬ್ಬಗಳಲ್ಲಿಯೂ ಪಾಲನೆಯಾಗಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಹಬ್ಬಗಳಲ್ಲಿ ಪಾಲಿಸುವಂತೆ ಸ್ಥಳೀಯ ಪೊಲೀಸರು ಸೂಚನೆ ನೀಡಬೇಕು. ಡಿಸಿಪಿಗಳು ಕೂಡಲೇ ತಮ್ಮ ವಿಭಾಗದ ಠಾಣೆ ಇನ್ಸ್​​​ಪೆಕ್ಟರ್​ಗಳಿಗೆ ಈ ಬಗ್ಗೆ ನಿರ್ದೇಶನ ನೀಡಬೇಕು. ಇನ್ಸ್​ಪೆಕ್ಟರ್ ಸ್ಥಳೀಯ ಧಾರ್ಮಿಕ ಮುಖಂಡರ ಜೊತೆ ಸಭೆ ಜೊತೆಗೆ ಶಾಂತಿ ಪಾಲನಾ ಸಭೆ ಕೂಡ ನಡೆಸಬೇಕು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img