Sunday, September 19, 2021
Homeಕ್ರಿಕೆಟ್Eng vs Ind 4th Test: ಸೋಲಿನ ಸುಳಿಯಲ್ಲಿ ಇಂಗ್ಲೆಂಡ್!

ಇದೀಗ ಬಂದ ಸುದ್ದಿ

Eng vs Ind 4th Test: ಸೋಲಿನ ಸುಳಿಯಲ್ಲಿ ಇಂಗ್ಲೆಂಡ್!

ಓವಲ್​(ಲಂಡನ್​): ಆತಿಥೇಯ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್​​ ಪಂದ್ಯದ ಕೊನೆಯ ದಿನವಾಗಿರುವ ಇಂದು ಭಾರತ ಗೆಲುವಿನ ಸನಿಹ ಬಂದು ತಲುಪಿದೆ. ಭೋಜನ ವಿರಾಮದ ವೇಳೆಗೆ 2 ವಿಕೆಟ್​ ಕಳೆದುಕೊಂಡಿದ್ದ ಇಂಗ್ಲೆಂಡ್​ ಇದೀಗ 6 ವಿಕೆಟ್‌ ನಷ್ಟಕ್ಕೆ 147 ರನ್​ಗಳಿಕೆ ಮಾಡಿದೆ.

ಯಾವುದೇ ವಿಕೆಟ್​ ನಷ್ಟವಿಲ್ಲದೇ ನಿನ್ನೆ 77 ರನ್​ಗಳಿಕೆ ಮಾಡಿದ್ದ ಇಂಗ್ಲೆಂಡ್ ಇಂದು ತನ್ನ ಬ್ಯಾಟಿಂಗ್ ಮುಂದುವರೆಸಿತು. ಆರಂಭಿಕರಾದ ರೋರಿ ಬರ್ನ್ಸ್​​​ 50 ರನ್​ ಹಾಗೂ ಡೇವಿಡ್ ಮಲನ್​ 5 ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಬರ್ನ್ಸ್​​ ವಿಕೆಟ್​ ಪಡೆದುಕೊಳ್ಳುವಲ್ಲಿ ಶಾರ್ದೂಲ್ ಠಾಕೂರ್ ಯಶಸ್ವಿಯಾಗಿದ್ದು, ಮಲನ್​ ರನೌಟ್ ಬಲೆಗೆ ಬಿದ್ದರು. ಇದಾದ ಬಳಿಕ ಡೇವಿಡ್ ಮಲನ್ ರನೌಟ್‌ ಹಾಗೂ ಒಲ್ಲಿ ಪೋಪ್‌(0) ಬೂಮ್ರಾಗೆ ವಿಕೆಟ್ ಒಪ್ಪಿಸಿದರು.

ಬೋಜನ ವಿರಾಮದ ವೇಳೆಗೆ ಎರಡು ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಿತಿಯಲ್ಲಿದ್ದ ಇಂಗ್ಲೆಂಡ್​ಗೆ ಟೀಂ ಇಂಡಿಯಾ ಆಘಾತ ನೀಡಿತು. ಲಂಚ್‌ಬ್ರೇಕ್​ ಬಳಿಕ ಮೈದಾನಕ್ಕೆ ಬಂದ ಹಮೀದ್​ 63 ರನ್​, ಪೋಪ್​​ 2ರನ್​ ಹಾಗೂ ಬೈರ್​​ಸ್ಟೋವ್​​​​ 0 ಹಾಗೂ ಮೊಯಿನ್​ ಅಲಿ 0 ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img