Sunday, September 19, 2021
Homeಕ್ರೈಂ ನ್ಯೂಸ್ಕೆಲಸ ಮಾಡ್ತಿದ್ದ ಅಂಗಡಿಗೆ ಕನ್ನ, ಐಷಾರಾಮಿ ಜೀವನ..

ಇದೀಗ ಬಂದ ಸುದ್ದಿ

ಕೆಲಸ ಮಾಡ್ತಿದ್ದ ಅಂಗಡಿಗೆ ಕನ್ನ, ಐಷಾರಾಮಿ ಜೀವನ..

ಹೈದರಾಬಾದ್ (ತೆಲಂಗಾಣ): ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಇಬ್ಬರನ್ನು ಪಂಜಾಗುಟ್ಟ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗುಲಾಬ್ ಮಾಲಿ ಹಾಗೂ ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಅಂದಾಜು 1 ಕೋಟಿ ರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಆರೋಪಿಗಳಿಬ್ಬರು ಕಳೆದ 10 ವರ್ಷಗಳಿಂದ ಮುಂಬೈನ ರಾನುಜಾ ಜ್ಯುವೆಲ್ಲರ್ಸ್​​ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದರು. ಗುಲಾಬ್​​ ತನ್ನ ಮಾಲೀಕನಿಂದ ಆಭರಣಗಳನ್ನು ಪಡೆದು ಹೈದರಾಬಾದಿನ ವಿವಿಧ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ. ಆದರೆ, ಆ ವಹಿವಾಟಿನಲ್ಲಿ ನಿರೀಕ್ಷೆಗೆ ತಕ್ಕಷ್ಟು ಲಾಭ ಸಿಗಲಿಲ್ಲವಾದ್ದರಿಂದ ಪ್ರವೀಣ್ ಜತೆ ಸೇರಿ ಕಳ್ಳತನಕ್ಕಿಳಿದಿದ್ದ ಎಂದು ಹೇಳಿದ್ದಾರೆ.

ಬಳಿಕ ಇವರಿಬ್ಬರು, ತಾವು ಕೆಲಸ ಮಾಡುತ್ತಿದ್ದ ಅಂಗಡಿಗಳಲ್ಲಿಯೇ ಕಳ್ಳತನ ಮಾಡಿ, ಮುಂಬೈನಿಂದ ಹೈದರಾಬಾದ್​ಗೆ ಬಂದರು. ಕದ್ದ ಆಭರಣದಲ್ಲಿ 69.150 ಗ್ರಾಂ ಚಿನ್ನವನ್ನು 2 ಲಕ್ಷ ರೂ.ಗೆ ಅಡವಿಟ್ಟು, ಮೋಜು ಮಸ್ತಿಯಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img