Wednesday, September 22, 2021
Homeಕೋವಿಡ್-19ಧನ್ವಂತರಿ ನರ್ಸಿಂಗ್ ಕಾಲೇಜಿನ 16 ವಿದ್ಯಾರ್ಥಿಗಳಿಗೆ ಕೋವಿಡ್​ ದೃಢ

ಇದೀಗ ಬಂದ ಸುದ್ದಿ

ಧನ್ವಂತರಿ ನರ್ಸಿಂಗ್ ಕಾಲೇಜಿನ 16 ವಿದ್ಯಾರ್ಥಿಗಳಿಗೆ ಕೋವಿಡ್​ ದೃಢ

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುವಾಗಲೇ, ರಾಜಧಾನಿಯಲ್ಲಿ ಇದೀಗ ಕಾಲೇಜುಗಳೇ ಸೋಂಕು ಹರಡುವ ತಾಣವಾಗುತ್ತಿವೆ. ನಿನ್ನೆಯಷ್ಟೇ ಕ್ರಿಶ್ಚಿಯನ್ ಕಾಲೇಜಿನಲ್ಲಿ 34 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದೀಗ ದಾಸರಹಳ್ಳಿ ವಲಯದ ಚಿಕ್ಕಬಾಣಾವರದಲ್ಲಿರುವ ಧನ್ವಂತರಿ ನರ್ಸಿಂಗ್ ಕಾಲೇಜಿನಲ್ಲಿ 16 ವಿದ್ಯಾರ್ಥಿಗಳಿಗೆ ಕೋವಿಡ್​ ದೃಢಪಟ್ಟಿದೆ.‌

ಮೊದಲು ಒಬ್ಬ ವಿದ್ಯಾರ್ಥಿಗೆ ಸೋಂಕು ತಗುಲಿತ್ತು. ಬಳಿಕ ಆತನ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆ ಮಾಡಿದಾಗ, 11 ಮಂದಿಗೆ ವೈರಸ್​ ತಗುಲಿರುವುದು ದೃಢಪಟ್ಟಿದೆ. ಬಳಿಕ ಕಾಲೇಜಿನ ಸುಮಾರು 42 ವಿದ್ಯಾರ್ಥಿಗಳನ್ನ ಟೆಸ್ಟ್​ಗೆ ಒಳಪಡಿಸಿದಾಗ, ಅದರಲ್ಲಿ ಮತ್ತೆ ನಾಲ್ವರಿಗೆ ಪಾಸಿಟಿವ್​ ಕಂಡುಬಂದಿದೆ. ಸದ್ಯ ಬಿಬಿಎಂಪಿಯು ಕಾಲೇಜಿನ ಹಾಸ್ಟೆಲ್​ನ್ನು ಮೈಕ್ರೋ ಕಂಟೈನ್ಮೆಂಟ್ ಜೋನ್ ಆಗಿ ಮಾಡಲಾಗಿದೆ.

12 ವಿದ್ಯಾರ್ಥಿಗಳನ್ನು ಮಂಜುನಾಥ್ ನಗರದ ಕೋವಿಡ್ ಕೇರ್ ಸೆಂಟರ್​ಗೆ ಶಿಫ್ಟ್​ ಮಾಡಲಾಗಿದ್ದು, 77 ಪ್ರಾಥಮಿಕ ಹಾಗು 88 ದ್ವಿತೀಯ ಸಂಪರ್ಕಿತರನ್ನ ಗುರುತಿಸಲಾಗಿದೆ. ನಿನ್ನೆ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಕಾಲೇಜಿನಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img