Wednesday, September 22, 2021
Homeಸುದ್ದಿ ಜಾಲಪದಕ ಗೆದ್ದು ತಾಯ್ನಾಡಿಗೆ ಬಂದ ಸುಮಿತ್​, ದೇವೇಂದ್ರ, ಯೋಗೇಶ್

ಇದೀಗ ಬಂದ ಸುದ್ದಿ

ಪದಕ ಗೆದ್ದು ತಾಯ್ನಾಡಿಗೆ ಬಂದ ಸುಮಿತ್​, ದೇವೇಂದ್ರ, ಯೋಗೇಶ್

ನವದೆಹಲಿ: ಜಪಾನ್​ನ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​​​ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಪದಕ ಗೆದ್ದು ತಾಯ್ನಾಡಿಗೆ ಹಿಂದಿರುಗಿರುವ ಮೂವರು ಅಥ್ಲೀಟ್ಸ್​ಗಳಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ದೆಹಲಿ ಏರ್​ಪೋರ್ಟ್​ಗೆ ಬಂದಿಳಿಯುತ್ತಿದ್ದಂತೆ ಅವರನ್ನ ಆತ್ಮೀಯವಾಗಿ ಸ್ವಾಗತ ಮಾಡಿಕೊಳ್ಳಲಾಯಿತು.

ಜಾವಲಿನ್​ ಥ್ರೋನಲ್ಲಿ ಸುಮಿತ್​​ ಚಿನ್ನದ ಪದಕ ಗೆದ್ದಿದ್ದು, ಉಳಿದಂತೆ ದೇವೇಂದ್ರ ಹಾಗೂ ಯೋಗೀಶ್​ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಸುಮಿತ್ ಅಂತಿಲ್ 68.55 ಮೀಟರ್ ದೂರ ಜಾವಲಿನ್​ ಎಸೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರೆ, ದೇವೇಂದ್ರ ಎಫ್​​ 46 ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದಾರೆ. ಡಿಸ್ಕಸ್​ ಎಸೆತದಲ್ಲಿ ಯೋಗೀಶ್​ ಕತುನಿಯಾ ಎಫ್​ 56 ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದಾರೆ. ಇವರ ಸಾಧನೆಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img