Sunday, September 19, 2021
Homeಸುದ್ದಿ ಜಾಲಆರು ಮಂದಿಗೆ ಚೂರಿ ಇರಿದ ಉಗ್ರನ ಗುಂಡಿಕ್ಕಿ ಕೊಂದ ಪೊಲೀಸರು

ಇದೀಗ ಬಂದ ಸುದ್ದಿ

ಆರು ಮಂದಿಗೆ ಚೂರಿ ಇರಿದ ಉಗ್ರನ ಗುಂಡಿಕ್ಕಿ ಕೊಂದ ಪೊಲೀಸರು

ವೆಲ್ಲಿಂಗ್ಟನ್ (ನ್ಯೂಜಿಲ್ಯಾಂಡ್): ಸೂಪರ್‌ ಮಾರ್ಕೆಟ್‌ಗೆ ನುಗ್ಗಿ ಆರು ಮಂದಿ ವ್ಯಾಪಾರಿಗಳಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಉಗ್ರನನ್ನು ನ್ಯೂಜಿಲ್ಯಾಂಡ್ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.

ನ್ಯೂಜಿಲ್ಯಾಂಡನ್​ ಅತಿದೊಡ್ಡ ನಗರವಾದ ಆಕ್ಲೆಂಡ್‌ನ ಕೌಂಟ್‌ಡೌನ್ ಸೂಪರ್‌ ಮಾರ್ಕೆಟ್‌ನಲ್ಲಿ ಇಂದು ಬೆಳಗ್ಗೆ ನಡೆದ ಈ ಘಟನೆಯನ್ನು ಪ್ರಧಾನಿ ಜಸಿಂಡಾ ಅರ್ಡೆರ್ನ್ ಖಂಡಿಸಿದ್ದಾರೆ. ಇದೊಂದು ಅರ್ಥಹೀನ ಹಾಗೂ ಭಯೋತ್ಪಾದಕ ದಾಳಿ. ಆ ವ್ಯಕ್ತಿ ಇಸ್ಲಾಮಿಕ್ ಸ್ಟೇಟ್ (ISIS) ಗುಂಪಿನಿಂದ ಪ್ರಭಾವಿತನಾದ ಶ್ರೀಲಂಕಾ ಪ್ರಜೆಯಾಗಿದ್ದು, ನಮ್ಮ ರಾಷ್ಟ್ರದ ಭದ್ರತಾ ಏಜೆನ್ಸಿಗಳಿಗೆ ಈತ ವಾಂಟೆಡ್​ ಉಗ್ರನಾಗಿದ್ದ ಎಂದು ಜಸಿಂಡಾ ಅರ್ಡೆರ್ನ್ ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಆರು ಮಂದಿಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಉಗ್ರನ ನಿರಂತರ ಮೇಲ್ವಿಚಾರಣೆಯಲ್ಲಿದ್ದ ನಮ್ಮ ಪೊಲೀಸರು ಕೆಲವೇ ಕ್ಷಣಗಳಲ್ಲಿ ಆತನನ್ನು ಹೊಡೆದುರುಳಿಸಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img