Sunday, September 19, 2021
Homeಸುದ್ದಿ ಜಾಲಚಿರು - ಮೇಘನಾ ಮುದ್ದು ಮಗನ ಹೆಸರು ರಿವೀಲ್

ಇದೀಗ ಬಂದ ಸುದ್ದಿ

ಚಿರು – ಮೇಘನಾ ಮುದ್ದು ಮಗನ ಹೆಸರು ರಿವೀಲ್

ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಗೆ ಪುತ್ರ ಜನಿಸಿ ಸುಮಾರು 11 ತಿಂಗಳು ಕಳೆದಿದೆ. ಇದೀಗ ಮೇಘನಾ ರಾಜ್​ ತನ್ನ ಮುದ್ದು ಮಗನಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ. ಇಲ್ಲಿಯವರೆಗೆ ಸಾಕಷ್ಟು ಸಸ್ಪೆನ್ಸ್​ ಆಗಿದ್ದ ಜೂನಿಯರ್​ ಚಿರುವಿನ ನಿಜವಾದ ಹೆಸರು ಕೊನೆಗೂ‌ ರಿವೀಲ್ ಆಗಿದೆ.

ನಿನ್ನೆಯಷ್ಟೇ ಮೇಘನಾ ತಮ್ಮ ಮಗನ‌ ನಾಮಕರಣಕ್ಕೆ ಸಂಬಂಧಿಸಿದ ವಿಶೇಷ​ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಈವರೆಗೆ ಮಗನಿಗೆ ಕರೆಯಲಾಗುತ್ತಿದ್ದ ಕೆಲವು ಹೆಸರುಗಳನ್ನು ಉಲ್ಲೇಖಿಸಿ, ಅಧಿಕೃತ ಹೆಸರು ನಾಳೆ ತಿಳಿಸುವುದಾಗಿ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು.

‘ನಮ್ಮ ರಾಜಕುಮಾರನಿಗೆ ಈಗ ಹೆಸರು ಇಡಲಾಗಿದೆ. ಅವನ ಕುರಿತು ಎಲ್ಲರಿಂದ ನನಗೆ ಎದುರಾಗುತ್ತಿದ್ದ ಮೊದಲ ಪ್ರಶ್ನೆಯೇ ನಿಮ್ಮ ಮಗನ‌ ಹೆಸರು ಏನು? ಎಂಬುದು. ಈಗ ರಾಜ ತನ್ನ ಮಗನಿಗೆ ಒಂದು ಹೆಸರು ಆಯ್ಕೆ ಮಾಡಿದ್ದಾನೆ. ಅದೇನು ಎಂಬುದನ್ನು ಸೆಪ್ಟೆಂಬರ್ 3ರಂದು ತಿಳಿಸುತ್ತೇನೆ’ ಎಂದು ಮೇಘನಾ ರಾಜ್ ಪೋಸ್ಟ್​ ಮಾಡಿದ್ದರು. ಇದೀಗ ಜೂನಿಯರ್ ಚಿರುಗೆ ‘ರಾಯನ್ ರಾಜ್ ಸರ್ಜಾ’ ಎಂದು ಹೆಸರಿಟ್ಟಿರುವುದನ್ನು ಬಹಿರಂಗಪಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img