Wednesday, September 22, 2021
Homeಸುದ್ದಿ ಜಾಲಇಂದು ಸುದೀಪ್‌ ಬರ್ತ್‌ಡೇ: ಕಿಚ್ಚ ಅಭಿಮಾನಿಗಳ ಪಾಲಿಗೆ ಸಂಭ್ರಮದ ದಿನ

ಇದೀಗ ಬಂದ ಸುದ್ದಿ

ಇಂದು ಸುದೀಪ್‌ ಬರ್ತ್‌ಡೇ: ಕಿಚ್ಚ ಅಭಿಮಾನಿಗಳ ಪಾಲಿಗೆ ಸಂಭ್ರಮದ ದಿನ

ಇಂದು ಕಿಚ್ಚ ಸುದೀಪ್‌ ಅಭಿಮಾನಿಗಳ ಪಾಲಿಗೆ ಸಂಭ್ರಮದ ದಿನ. ಅದಕ್ಕೆಕಾರಣ ಇಂದು ನಟ ಸುದೀಪ್‌ ಅವರ ಹುಟ್ಟುಹಬ್ಬ.

ಈಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಸಂಭ್ರಮ ಆರಂಭವಾಗಿದೆ. ಈ ಹಿಂದಿನ ವರ್ಷಗಳಲ್ಲಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸುದೀಪ್‌ ಮನೆ ಮುಂದೆ ಸೇರಿ ಆಚರಿಸುತ್ತಿದ್ದರು. ಆದರೆ,ಕಳೆದೊಂದು ವರ್ಷದಿಂದ ಆ ಸಂಭ್ರಮ ಸಾಧ್ಯವಾಗುತ್ತಿಲ್ಲ. ಈ ವರ್ಷವೂ ಸುದೀಪ್‌ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೆ, ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಸಾಮಾಜಿಕಕಾರ್ಯಗಳ ಮೂಲಕ ಆಚರಣೆ ಮಾಡುತಿ ದ್ದಾರೆ.

ಸುದೀಪ್‌ ಚಾರಿಟೇಬಲ್‌ ಸೊಸೈಟಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇನ್ನು, ಸುದೀಪ್‌ ಅವರ ಸಿನಿಮಾ ವಿಷಯಕ್ಕೆ ಬರುವುದಾದರೆ, ಸದ್ಯ “ವಿಕ್ರಾಂತ್‌ ರೋಣ’ ಹಾಗೂ “ಕೋಟಿಗೊ ಬ್ಬ-3′ ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ. ಬರ್ತ್‌ಡೇ ಪ್ರಯುಕ್ತ “ವಿಕ್ರಾಂತ್‌ ರೋಣ’ ಚಿತ್ರದ “ಡೆಡ್‌ ಮ್ಯಾನ್‌ ಆಯಂಥಮ್‌ ಸಾಂಗ್‌’ ಬಿಡುಗಡೆಯಾಗುತ್ತಿದೆ.

ನೀರಜ್‌ ಚೋಪ್ರಾ ವಿಶ್‌: ಸುದೀಪ್‌ ಅವರಿಗೆ ಒಲಿಂಪಿಕ್ಸ್‌ ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ನೀರಜ್‌ ಚೋಪ್ರಾ ಕೂಡಾ ಶುಭ ಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯ ಗಳು ಸುದೀಪ್‌ ಜೀ. ನಿಮ್ಮ ಮುಂದಿನ ಸಿನಿಮಾಗಳಿಗೆ ಒಳ್ಳೆಯದಾಗಲಿ’ ಎಂದಿದ್ದಾರೆ.

“ಕಬ್ಜ’ದಲ್ಲಿ ವಿಭಿನ್ನ ಗೆಟಪ್‌ : ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ ಪ್ಯಾನ್‌ ಇಂಡಿಯಾ “ಕಬ್ಜ’ ಚಿತ್ರದಲ್ಲಿ ಸುದೀಪ್‌ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿರುವ ಸುದೀಪ್‌ ಗೆಟಪ್‌ನ ಸ್ಕೆಚ್‌ ಸಖತ್‌ ವೈರಲ್‌ ಆಗಿದೆ. ಅಭಿಮಾನಿಗಳಿಗೂ ಈ ಸಿನಿಮಾ ಮೇಲೆ ಸಾಕಷ್ಟುನಿರೀಕ್ಷೆಇದೆ. ಚಿತ್ರದಲ್ಲಿ ಉಪೇಂದ್ರ ನಾಯಕರಾಗಿ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಭಾಗದ ಚಿತ್ರೀಕರಣ ಪೂರೈಸಿದ್ದು, ಈ ತಿಂಗಳ ಕೊನೆಗೆ “ಕಬ್ಜ’ ಸೆಟ್‌ಗೆ ಸುದೀಪ್‌ ಎಂಟ್ರಿಕೊಡಲಿ ದ್ದಾರೆ. ಈ ನಡುವೆಯೇ ಸುದೀಪ್‌ ಅವರು ತಮಿಳು ನಿರ್ದೇಶಕ ‌ವೆಂಕಟ್‌ಪ್ರಭು ಜೊತೆಗೆ ಸಿನಿಮಾವೊಂದನ್ನು ಮಾಡಲಿದ್ದಾರೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img